Skip to main content


ಸ್ಯಾಂಡಲ್‍ವುಡ್ ನಟಿ ಜೊತೆ ಕ್ರಿಕೆಟ್ ತಾರೆ ಚಹಲ್ ಶೀಘ್ರವೇ ಮದುವೆ! ಆ ನಟಿ ಯಾರು ಗೊತ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಯಜುವೇಂದ್ರ ಚಹಲ್ ಸ್ಯಾಂಡಲ್‍ವುಡ್ ನಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೇ ಆ ಸ್ಯಾಂಡಲ್ ವುಡ್ ನಟಿಯೊಂದಿಗೆ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅಂದ ಹಾಗೇ ಆ ನಟಿಯ ಹೆಸರು ತನಿಷ್ಕಾ ಕಪೂರ್, ತನಿಷ್ಕಾ ಕಪೂರ್ ರ್ಫಸ್ಟ್ ರ‍್ಯಾಂಕ್ ರಾಜು ಚಿತ್ರದಲ್ಲಿ ಗುರುನಂದನ್ ಜೊತೆ ನಾಯಕಿಯಾಗಿ ನಟನೆ ಮಾಡಿದ್ದಾರೆ. ತನಿಷ್ಕಾ ಕಪೂರ್ ಜೊತೆ ಚಹಲ್ ಡೇಟಿಂಗ್ ಮಾಡುತ್ತಿದ್ದು, ಐಪಿಎಲ್ ಮುಗಿದ ನಂತರ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿಮಾಡಿದೆ.       

short by Prajwal / more at Dailyhunt

Comments