Skip to main content


ತಂಡ ಸಂಕಷ್ಟದಲ್ಲಿದ್ದಾಗ ಹೇಗೆ ಆಡಬೇಕೆಂದು ಇವರಿಂದ ಕಲಿಯುತ್ತಿದ್ದೇನೆ: ಸಾಮ್‌ ಬಿಲ್ಲಿಂಗ್ಸ್‌

ತಂಡ ಸಂಕಷ್ಟದಲ್ಲಿದ್ಧಾಗ ಹೇಗೆ ಆಡಬೇಕೆಂಬುದನ್ನು ಕೂಲ್‌ ಕ್ಯಾಪ್ಟನ್‌ ಧೋನಿಯಿಂದ ಕಲಿಯುವುದಕ್ಕೆ ನನಗೆ ಅವಕಾಶ ಸಿಕ್ಕಿದೆ ಎಂದು ಇಂಗ್ಲೆಂಡ್‌ ತಂಡದ ಆಟಗಾರ ಸಾಮ್‌ ಬಿಲ್ಲಿಂಗ್ಸ್‌ ಅಭಿಪ್ರಾಯ ಪಟ್ಟಿದ್ದಾರೆ. ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ನಿರ್ಣಾಯಕ ಹಂತದಲ್ಲಿ ಔಟಾದಾಗ ಧೋನಿ ತಾಳ್ಮೆಯ ಆಟದ ಮೂಲಕ ತಂಡವನ್ನು ಸುಸ್ಥಿತಿಗೆ ತರಲು ಪ್ರಯತ್ನಿಸುತ್ತಾರೆ. ನಾನು ಧೋನಿಯಂತಹ ನಾಯಕನ ಜೊತೆ ಹಾಗೂ ಚೆನ್ನೈ ಸೂಪರ್‌ಕಿಂಗ್ಸ್‌ ನಂತ ದೊಡ್ಡ ತಂಡದಲ್ಲಿ ಆಡಲು ನಿಜಕ್ಕೂ ಉತ್ಸುಕನಾಗಿದ್ದೇನೆ ಎಂದು ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ಸ್ಪೆಷಲಿಸ್ಟ್‌ ಎಂದೇ ಖ್ಯಾತವಾಗಿರುವ ಸಾಮ್‌ ಬಿಲ್ಲಿಂಗ್ಸ್‌ ಹೇಳಿದ್ದಾರೆ.   
 
short by Pawan / read more at Eenadu India