Skip to main content


ಮತದಾನ ಮಾಡಿ ಪ್ರಜಾಪ್ರಭುತ್ವ ಗೆಲ್ಲಿಸಿ: ರಾಹುಲ್ ದ್ರಾವಿಡ್

ಭಾರತದ ಖ್ಯಾತ ಕ್ರಿಕೆಟಿಗ ಕ್ರಿಕೆಟಿಗ ಹಾಗೂ ಕರ್ನಾಟಕದವರೇ ಆದ ರಾಹುಲ್ ದ್ರಾವಿಡ್ ಹೇಳ್ತಾರೆ 'ನಾನೂ ಓಟ್ ಮಾಡ್ತೇನೆ- ನೀವೂ ತಪ್ಪದೆ ಓಟ್ ಮಾಡಿ' ಪ್ರಜಾಪ್ರಭುತ್ವ ಗೆಲ್ಲಿಸಿ ಅಂತ.  ದೇಶದ ಹೆಮ್ಮೆಯ ಕ್ರಿಕೆಟಿಗ, ಕರ್ನಾಟಕದವರೇ ಆಗಿರುವ ರಾಹುಲ್ ದ್ರಾವಿಡ್ ಈ ಬಾರಿಯ ವಿಧಾನಸಭೆ ಚುನಾವಣೆಗೆ ಮತದಾನ ಜಾಗೃತಿಗಾಗಿ ಚುನಾವಣಾ ಆಯೋಗ ನೇಮಕ ಮಾಡಿರುವ ಯೂತ್ ಐಕಾನ್ ಆಗಿದ್ದಾರೆ. ಭಾರತದ ಯುವ ಕ್ರಿಕೆಟ್ ತಂಡ ಇತ್ತೀಚೆಗಷ್ಟೇ ವಿಶ್ವಕಪ್ ಗೆದ್ದಿರುವುದು ರಾಹುಲ್ ದ್ರಾವಿಡ್ ಅವರ ನೇತೃತ್ವದಲ್ಲಿಯೇ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಹೀಗಾಗಿ ಇಂತಹ ಯೂತ್ ಐಕಾನ್ ಇದೀಗ ವಿಧಾನಸಭಾ ಚುನಾವಣೆಗೆ ಎಲ್ಲರನ್ನು ಮತದಾನಕ್ಕೆ ಪ್ರೇರೇಪಿಸುವ ಸಲುವಾಗಿ 'ನಾನೂ ಓಟ್ ಮಾಡ್ತೇನೆ- ನೀವೂ ತಪ್ಪದೆ ಓಟ್ ಮಾಡಿ' ಪ್ರಜಾ ಪ್ರಭುತ್ವ ಗೆಲ್ಲಿಸಿ ಎಂದು ಧಾರವಾಡ ಜಿಲ್ಲೆಯಲ್ಲಿ ಮತದಾರರಿಗೆ ಮನವಿ ಮಾಡುತ್ತಿದ್ದಾರೆ.

short by : Nithin / read more at Uk suddi

Comments