Skip to main content


ದರ್ಶನ್ ಬಗ್ಗೆ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಸುದೀಪ್

ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ 'ಕುರುಕ್ಷೇತ್ರ' ಚಿತ್ರ ಹಾಗೂ ದರ್ಶನ್ ಗೆ ಶುಭ ಕೋರಿದ್ದರು. ಈ ಟ್ವಟ್ಟ್ ನಂತರ ಇವರಿಬ್ಬರ ಮಧ್ಯೆ ಮತ್ತೆ ಸ್ನೇಹ ಚಿಗುರಿದೆ ಎಂಬ ಮಾತುಗಳು ಕೇಳಿ ಬಂತು. ''ಕುರುಕ್ಷೇತ್ರ ಮುಹೂರ್ತ ಆಯಿತು. ನೀವು ದರ್ಶನ್ ಅವರಿಗೆ ವಿಶ್ ಮಾಡಿ ಒಂದು ಟ್ವೀಟ್ ಮಾಡಿದ್ರಿ. ನಂತರ ನಿಮ್ಮಿಬ್ಬರ ಸ್ನೇಹ ಮತ್ತೆ ಮರುಕಳಿಸಿದೆ ಎಂದು ಪತ್ರಿಕೆಗಳಲ್ಲಿ ವರದಿ ಆಯಿತು. ಚಿತ್ರರಂಗದಲ್ಲೂ ಈ ಬಗ್ಗೆ ಸಂತೋಷ ವ್ಯಕ್ತವಾಯಿತು. ಈ ಬಗ್ಗೆ ನೀವು ಏನ್ ಹೇಳ್ತೀರಾ?'' ಎಂದು ಜೋಗಿ ಅವರು ಸುದೀಪ್ ಗೆ ಪ್ರಶ್ನಿಸಿದರು. ''ಕುರುಕ್ಷೇತ್ರ ಮುಹೂರ್ತ ಆಗಿದ್ದು ಟ್ವಿಟ್ಟರ್ ನಲ್ಲಿ ನೋಡಿದೆ. ನೀವು ನನ್ನ ಸಿನಿಮಾಗಳನ್ನ ನೋಡಿರಬಹುದು. 'ಮಾಣಿಕ್ಯ', 'ಆಟೋಗ್ರಾಫ್', 'ಶಾಂತಿ ನಿವಾಸ'.....ನನಗೆ ತುಂಬ ಪಾತ್ರಗಳಿದ್ರೆ ತುಂಬ ಇಷ್ಟ. ರವಿ ಸರ್, ಅಂಬರೀಷ್ ಅಣ್ಣ, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಎಲ್ಲರೂ ಒಟ್ಟಿಗೆ ಇರುವುದು ನನಗೆ ಇಷ್ಟವಾಯಿತು. ಮುನಿರತ್ನ ಅವರ ಪ್ರಯತ್ನಕ್ಕೆ ಮೆಚ್ಚಲೇಬೇಕು. ಇದು ಸಾಮಾನ್ಯವಾದ ವಿಷ್ಯವಲ್ಲ. ಸೋ ವಿಶ್ ಮಾಡ್ಬೇಕು ಎನಿಸಿತು''. ''ದರ್ಶನ್ ಅವರ ಫೋಟೋ ನೋಡಿದೆ. ಅದರಲ್ಲಿ ನಾನೊಬ್ಬ ಕಲಾವಿದನಾಗಿ ನನ್ನನ್ನ ನಾನೇ ಊಹಿಸಿಕೊಂಡೆ. ಆದ್ರೆ, ಅದು ಹಾಸ್ಯಾಸ್ಪದವಾಗಿತ್ತು'' ಎಂದು ಸುದೀಪ್ ನಕ್ಕರು. ನಂತರ ಮಾತನಾಡಿದ ಅವರು ''ಆ ಪಾತ್ರಕ್ಕೆ ಅವರನ್ನ ಬಿಟ್ರೆ ಬೇರೆ ಯಾರಿಗೂ ಸೂಕ್ತವಾಗಲ್ಲ ಎನಿಸಿತು'' ಎಂದು ಸಮರ್ಥಿಸಿಕೊಂಡರು.     

short by Pawan / more at Filmibeat


Comments