Skip to main content


ಪುತ್ರಿಯರನ್ನೇ ದಂಧೆಗೆ ನೂಕಿದ್ಲು ತಾಯಿ, ಕಾರಣ ಗೊತ್ತಾ??

ಮುಂಬೈನ ಖೇರ್ ವಾಡಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ತನ್ನ ಪುತ್ರಿಯರನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ್ದ ಮಹಿಳೆಯನ್ನು ಬಂಧಿಸಿದ್ದಾರೆ.ಬಾಂದ್ರಾ ಏರಿಯಾದಲ್ಲಿನ ಎಸ್.ಆರ್.ಎ. ಬಿಲ್ಡಿಂಗ್ ನಲ್ಲಿ ವಾಸವಾಗಿರುವ ಮಹಿಳೆ 50,000 ರೂ. ಕರೆಂಟ್ ಬಿಲ್ ಕಟ್ಟುವ ಉದ್ದೇಶದಿಂದ 15 ಮತ್ತು 19 ವರ್ಷದ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಿದ್ದಾಳೆ.ಮಹಿಳೆ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅಧಿಕಾರಿ ಜಗದೀಶ್, ವಿಶೇಷ ತಂಡವನ್ನು ರಚಿಸಿದ್ದಾರೆ. ಈ ತಂಡದಲ್ಲಿದ್ದ ಪೊಲೀಸರು ಮಹಿಳೆಗೆ ಹುಡುಗಿಯರನ್ನು ಕಳಿಸುವಂತೆ ಕರೆ ಮಾಡಿದ್ದು, ಅದರಂತೆ ಹೋಟೆಲ್ ಒಂದಕ್ಕೆ ಮಕ್ಕಳನ್ನು ಕರೆದುಕೊಂಡು ಬಂದಿದ್ದ ಮಹಿಳೆಯನ್ನು ಮಫ್ತಿಯಲ್ಲಿದ್ದ ಪೊಲೀಸರು ಬಂಧಿಸಿದ್ದಾರೆ.ವಿಚಾರಣೆ ಸಂದರ್ಭದಲ್ಲಿ ಕರೆಂಟ್ ಬಿಲ್ ಕಟ್ಟಲು ಹೀಗೆ ಮಾಡಿದ್ದಾಗಿ ಮಹಿಳೆಯ ಪುತ್ರಿ ತಿಳಿಸಿದ್ದು, ಈ ಕುರಿತಾಗಿ ತನಿಖೆ ನಡೆಸಲಾಗಿದೆ. ಫೋಕ್ಸೋ ಕಾಯ್ದೆಯಡಿ ಮಹಿಳೆಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

short by: Nithin / more at Kannadadunia

Comments