Skip to main content


ಮೆಗಾಸ್ಟಾರ್ ಸಿನಿಮಾದಲ್ಲಿ ಕನ್ನಡದ ಕಿಚ್ಚ!

ಕೊಂಡೆಲಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ 'ಸೈರಾ' ನರಸಿಂಹ ರೆಡ್ಡಿ ಅನ್ನೋ ಶೀರ್ಷಿಕೆಯೊಂದಿಗೆ ಸಿನಿಮಾ ಸೆಟ್ಟೇರಲಿದ್ದು ಈ ಚಿತ್ರಕ್ಕೆ ಮೆಗಾಸ್ಟಾರ್ ಪುತ್ರ ಮೆಗಾ ಹೀರೊ ರಾಮ್ ಚರಣ್ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಹೇಳಲಾಗಿದೆ. ಸ್ಟಾರ್ ಕ್ಯಾಸ್ಟಿಂಗ್ ಗೆ ಸಂಭಂದಿಸಿದಂತೆ ಈ ಸಿನಿಮಾದಲ್ಲಿ ಮೆಗಾ ಸ್ಟಾರ್ ಜೊತೆಗೆ ನಾಯಕಿಯಾಗಿ ನಯನತಾರಾ ಮಿಂಚಲಿದ್ದಾರೆ. ಹಾಗು ವಿಶೇಷ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸುತ್ತಿರುವ ಸುದ್ದಿ ಈಗಾಗಲೇ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿತ್ತು. ಇದರ ಜೊತೆ ಜೊತೆಗೆ ನಮ್ಮ ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಮತ್ತೊಂದು ಸೆನ್ಸೇಷನ್ ಕ್ರಿಯೇಟ್ ಮಾಡಲಿದ್ದಾರೆ. 

short by Pawan / read more at Balkani News

Comments