Skip to main content


ಕನ್ನಡದ ಕೋಟ್ಯಧಿಪತಿಗೆ ರಮೇಶ್ ಅರವಿಂದ್ ಸಾರಥ್ಯ! ಯಾರು ಗೊತ್ತಾ ಮೊದಲ ಸ್ಪರ್ಧಿ?

ಕನ್ನಡದ ಕೋಟ್ಯಧಿಪತಿ ಕಿರುತೆರೆ ಇತಿಹಾಸದಲ್ಲೇ ಅತಿ ಹೆಚ್ಚು ಜನಪ್ರಿಯತೆ ಮತ್ತು ಟಿಆರ್ಪಿ ಗಳಿಸಿದ ಕಾರ್ಯಕ್ರಮ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಾದು ಕುಳಿತು ನೋಡುತ್ತಿದ್ದ ಕಾರ್ಯಕ್ರಮ ಕನ್ನಡದ ಕೋಟ್ಯಧಿಪತಿ. ಬರಿ ಮನರಂಜನೆಯಷ್ಟೆ ಅಲ್ಲದೆ ಒಳ್ಳೆಯ ಜ್ಞಾನ ಭಂಡಾರವನ್ನು ಹೊತ್ತು ತರುತ್ತಿದ್ದ ಈ ಕಾರ್ಯಕ್ರಮವನ್ನು ಎಲ್ಲರೂ ಮಿಸ್ ಮಾಡದೇ ನೋಡಿ ಒಂದೊಳ್ಳೇ ಕಾರ್ಯಕ್ರಮ ಎಂದು ಹೇಳುತ್ತಿದ್ದರು. ಈ ಕನ್ನಡದ ಕೋಟ್ಯಾಧಿಪತಿ ಈಗಾಗಲೇ ಎರಡು ಸೀಸನ್ ನಲ್ಲಿ ಬಂದಿತ್ತು ಎರಡು ಸೀಸನ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರೇ ಹಾಸ್ಟ್ ಮಾಡಿದ್ದರು ಇದೀಗ ರಮೇಶ್ ಅರವಿಂದ್ ಅವರು ಹೋಸ್ಟ್ ಮಾಡಲಿದ್ದಾರೆ. ಮೂಲಗಳ ಪ್ರಕಾರ ಕನ್ನಡದ ಕೋಟ್ಯಾಧಿಪತಿ ಸೀಸನ್ ಮೂರರ ಮೊದಲನೇ ಸ್ಪರ್ಧಿಯಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಭಾಗಿಯಾಗಲಿದ್ದಾರೆ ಎನ್ನುವ ಸುದ್ದಿಯಿದೆ.      

short by Pawan / more at Troll Haida


Comments