Skip to main content


ಮಂಗಳೂರು : ಕಟಪಾಡಿ ಕಟ್ಟಪ್ಪ ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ಮಾಡಿದ ನಟ ಕಿಚ್ಚ ಸುದೀಪ್

ರಾಜೇಶ್ ಬ್ರಹ್ಮಾವರ ಅವರ ನಿರ್ಮಾಣದ ‘ಕಟಪಾಡಿ ಕಟ್ಟಪ್ಪ’ ತುಳು ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವು ಏ. 29 ರ ಭಾನುವಾರ ನಗರದ ಪುರಭವನದಲ್ಲಿ ಜರಗಿತು. ಖ್ಯಾತ ಚಿತ್ರನಟ ಸುದೀಪ್ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು, ತುಳುಚಲನಚಿತ್ರ ರಂಗಕ್ಕೆ ಉತ್ತಮ ಭವಿಷ್ಯವಿದೆ. ತುಳುವರು ಭಾಷಾ ಪ್ರೇಮ ಮೆರೆದರೆ ಖಂಡಿತಾ ತುಳುಚಿತ್ರ ರಂಗದಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಿರೀಕ್ಷಿಸಬಹುದು ಎಂದರು. ಅಲ್ಲದೆ ಇಂದು ತುಳುಚಿತ್ರರಂಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ್ದು, 1971ರಿಂದ ತುಳು ಚಿತ್ರರಂಗ ಭಾರತೀಯ ಚಿತ್ರರಂಗದಲ್ಲಿದ್ದು, ಇದನ್ನು ಪುಟ್ಟ ಚಿತ್ರರಂಗ ಎಂದು ಕರೆಯಲು ಸಾಧ್ಯವಿಲ್ಲ. ಸ್ಯಾಂಡಲ್ ವುಡ್ ಕೋಸ್ಟಲ್ವುಡ್ ನ ಸಹೋದರಿ ಸಂಸ್ಥೆಯಂತೆ, ತುಳು ಚಿತ್ರರಂಗಕ್ಕೆ ಸಹಾಯ ಮಾಡಲು ಸದಾ ಸಿದ್ದ ಎಂದು ಹೇಳಿದರು.          

short by Pawan / more at DaijiWorld

P.C: Daijiworld247

Comments