Skip to main content


ಸಿರಿಂಜ್ ಸಂಕಷ್ಟದಿಂದ ಪಾರಾದ ಭಾರತ ತಂಡ

ಪ್ರತಿಷ್ಠಿತ ಕಾಮನ್ವೆಲ್ತ್ ಗೇಮ್್ಸ ಆರಂಭವಾಗುವ ಮುನ್ನವೇ ಬಾಕ್ಸರ್​ಗಳಿಂದ ಸಿರಿಂಜ್ ಬಳಕೆಗಾಗಿ ಸಂಕಷ್ಟ ಎದುರಿಸಿದ್ದ ಭಾರತ ತಂಡ ಕೊನೆಗೂ ನಿರಾಳವಾಗಿದೆ. ಸಿರಿಂಜ್ ಬಳಕೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಮನ್ವೆಲ್ತ್ ಗೇಮ್್ಸ ಫೆಡರೇಷನ್ (ಸಿಜಿಎಫ್)ವೈದ್ಯಕೀಯ ಸಮಿತಿಯ ಮೂಲಕ ತನಿಖೆ ನಡೆಸಿತ್ತು. ಸೋಮವಾರ ವೈದ್ಯಕೀಯ ಸಮಿತಿ ನೀಡಿದ ವರದಿಯ ಬಳಿಕ ಭಾರತದ ಕ್ರೀಡಾ ನಿಯೋಗಕ್ಕೆ ಸಿಜಿಎಫ್ ಕ್ಲೀನ್​ಚಿಟ್ ನೀಡಿದೆ. ಭಾರತದ ಬಾಕ್ಸರ್​ಗಳಿಂದ ಈ ಪ್ರಮಾದ ಆಗಿದೆ ಎಂದು ಕೋಚ್ ಹೇಳಿದ್ದ ಕಾರಣ, ಬಾಕ್ಸರ್​ಗಳ ಉದ್ದೀಪನ ಪರೀಕ್ಷೆ ನಡೆಸಲಾಗಿದೆ. ನಮ್ಮಿಂದ ಡೋಪಿಂಗ್ ನಿಯಮ ಉಲ್ಲಂಘನೆಯಾಗಿಲ್ಲ. ವಿಟಮಿನ್​ಗಳನ್ನು ತೆಗೆದುಕೊಳ್ಳುವ ಸಲುವಾಗಿ ಸಿರಿಂಜ್ ಬಳಸಿದ್ದೆವು. ಸಿಜಿಎಫ್ ನಿರ್ಧಾರದ ನಿರೀಕ್ಷೆಯಲ್ಲಿದ್ದೇವೆ ಎಂದು ಅಧಿಕಾರಿಯೊಬ್ಬರು ಈ ಮುನ್ನ ತಿಳಿಸಿದ್ದರು.           

Short by Prajwal / read more at Vijayavani

Comments