Skip to main content


ಸ್ಯಾಂಡಲ್ ವುಡ್ ನಟಿ ಮಯೂರಿ ಮಾಜಿ ಮುಖ್ಯಮಂತ್ರಿಗಳ ಮಗಳಂತೆ!?

ಕನ್ನಡದ ‘ಕೃಷ್ಣ ಲೀಲಾ’ ಚಿತ್ರದ ನಾಯಕಿ ಮಯೂರಿ ಮಾಜಿ ಮುಖ್ಯಮಂತ್ರಿಗಳ ಮಗಳಂತೆ. ಅಯ್ಯೋ ಇದೇನಿದು ಹೊಸ ವಿಚಾರ ಅಂತಾ ಶಾಕ್ ಆದ್ರಾ..!? ಇದು ರಿಯಲ್ನಲ್ಲಿ ಅಲ್ಲ, ರೀಲ್ ನಲ್ಲಿ! ನಟಿ ಮಯೂರಿ ಹೊಸ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅವರು ಮುಖ್ಯಮಂತ್ರಿಯ ಮಗಳ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಯೆಸ್, 'ಸಿಗ್ನೇಚರ್' ಎಂಬ ಹೊಸ ಸಿನಿಮಾದಲ್ಲಿ ನಟಿ ಮಯೂರಿ ನಟಿಸುತ್ತಿದ್ದು, ರಂಜಿತ್ ಕುಳಾಯಿ ಎಂಬ ಹೊಸ ಪ್ರತಿಭೆ ಮಯೂರಿಗೆ ನಾಯಕನಾಗಿ ನಟಿಸುತ್ತಿದ್ದಾರೆ. ಅಂದಹಾಗೆ ಈಗಾಗಲೇ ಚಿತ್ರದ ಚಿತ್ರೀಕರಣ ಕೂಡ ಶುರು ಆಗಿದೆ.

short by: Nithin / read more at KannadaNewsNow


Comments