Skip to main content


ಕಾಸ್ಟಿಂಗ್‌ ಕೌಚ್‌ ಇನ್ನೊಂದು ಭಯಾನಕ ಸತ್ಯ ಬಿಚ್ಚಿಟ್ಟ ಸ್ಯಾಂಡಲ್ ವುಡ್ ನಟಿ

ಈ ನಡುವೆ ಹರ್ಷಿಕಾ ಪೂಣಚ್ಚ ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ತಮ್ಮ ಅನಿಸಿಕೆಯನ್ನು ತಿಳಿಸಿದ್ದು ಅವಕಾಶಕ್ಕಾಗಿ ನಟಿಯರನ್ನು ಮಂಚಕ್ಕೆ ಕರೆಯುವ ಚಾಳಿ ಸಿನಿಮಾ ರಂಗದಲ್ಲಿ ಇರುವುದು ನಿಜ ಎಂದು ಒಪ್ಪಿಂಡಿದ್ದು, ಇದೇ ವೇಳೆ ಅವರು ಅದು ಆಯಾ ನಟಿಯರಿಗೆ ಸಂಬಂಧಿಸಿದ ವಿಚಾರ ಎಂದೂ ಕೂಡ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಅವರು 'ನಾನು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದೇನೆ. ಈವರೆಗೂ ಯಾರೂ ನನಗೆ ಆ ರೀತಿಯಲ್ಲಿ ನೇರವಾಗಿ ಆಫರ್‌ ಮಾಡಿಲ್ಲ. ಅಂತಹ ಸನ್ನಿವೇಶ ಬಂದರೆ, ನಾನು ಆ ಸಿನಿಮಾ ತಂಡದ ಜತೆಯೇ ಮಾತನಾಡುವುದನ್ನು ನಿಲ್ಲಿಸುತ್ತೇನೆ. ನನಗೆ ಅದರ ಅವಶ್ಯಕತೆಯೂ ಇಲ್ಲ ಅಂತ ಹೇಳಿದ್ದಾರೆ.    

short by Pawan / read more at Kannada News Now

Comments