Skip to main content


ಸುದೀಪ್​ಗೆ ಮತ್ತೆ ಟಾಲಿವುಡ್ ಬುಲಾವ್

ಸುದೀಪ್​ಗೆ ಇರುವ ಟಾಲಿವುಡ್ ನಂಟು ಮತ್ತೆ ಮುಂದುವರಿಯುವ ಲಕ್ಷಣಗಳು ಗೋಚರವಾಗಿವೆ. ಅದಕ್ಕೆ ಕಾರಣ ಸುದೀಪ್​ಗೆ ತೆಲುಗಿನಿಂದ ಮತ್ತೆ ಆಫರ್ ಬಂದಿದೆ ಎಂಬ ವಿಚಾರ! ಅದೂ, ರಾಮ್ ಚರಣ್ ನಟಿಸುತ್ತಿರುವ ಚಿತ್ರದಲ್ಲಿ! ಬೋಯಪಟಿ ಶ್ರೀನು ನಿರ್ದೇಶನದ ಚಿತ್ರದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಈಗಾಗಲೇ ಅನೇಕ ಸ್ಟಾರ್ ನಟರು ಈ ಚಿತ್ರತಂಡ ಸೇರಿಕೊಂಡಿದ್ದಾರೆ. ಈಗ ಸುದೀಪ್​ರನ್ನು ಕರೆತರುವ ಪ್ಲ್ಯಾನ್ ನಡೆಯುತ್ತಿದೆಯಂತೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಅವರ ಪಾತ್ರಕ್ಕೂ ಹೆಚ್ಚು ತೂಕ ಇರಲಿದೆಯಂತೆ. ಈ ಕುರಿತು ಈಗಾಗಲೇ ಅವರ ಜತೆ ಚಿತ್ರತಂಡ ಮಾತುಕತೆ ನಡೆಸಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಚಿತ್ರತಂಡದ ಯಾರೊಬ್ಬರೂ ಈ ಬಗ್ಗೆ ಹೇಳಿಕೊಂಡಿಲ್ಲ. ವಿಶೇಷ ಎಂದರೆ ‘ಸೈರಾ ನರಸಿಂಹ ರೆಡ್ಡಿ’ ಚಿತ್ರಕ್ಕೆ ರಾಮ್ ಚರಣ್ ಬಂಡವಾಳ ಹೂಡುತ್ತಿದ್ದಾರೆ. ಸುದೀಪ್ ನಟನೆಗೆ ಮನಸೋತಿರುವ ಅವರು, ಹೊಸ ಚಿತ್ರದಲ್ಲೂ ನಟಿಸುವಂತೆ ಕೋರಿದ್ದಾರೆ ಎನ್ನಲಾಗುತ್ತಿದೆ.

short by Sp / more at Vijayavani


Comments