Skip to main content


ಪ್ರಶಸ್ತಿ ಗೆಲ್ಲುವುದೊಂದೇ ಗುರಿ: ಕೊಹ್ಲಿ

ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿರುವ ತಂಡ ಮೊದಲ ‍ಪ್ರಶಸ್ತಿಯ ಸಂಭ್ರಮ ಅನುಭವಿಸುವಂತೆ ಮಾಡುವುದೇ ನನ್ನ ಗುರಿ. ಇದಕ್ಕಾಗಿ ಅರ್ಪಣಾ ಮನೋಭಾವದಿಂದ ಆಡಲಿದ್ದೇನೆ’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಅಭ್ಯಾಸದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪ್ರೇಕ್ಷಕರ ಮನ ಗೆಲ್ಲುವುದಕ್ಕಿಂತಲೂ ಮಿಗಿಲಾಗಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವುದು ನನ್ನ ಉದ್ದೇಶ’ ಎಂದರು. ಅತ್ಯುತ್ತಮ ಆಟಗಾರರನ್ನು ಹೊಂದಿದ್ದರೂ ಆರ್‌ಸಿಬಿಗೆ ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲಲು ಆಗಲಿಲ್ಲ.             

Short by Prajwal / read more at Prajavani

Comments