Skip to main content


ಮಹಿಳಾ ಸಾಧಕರ ಜೊತೆ ರಾಹುಲ್ ಸಂವಾದ ವೇಳೆ ರಮ್ಯಾ ದರ್ಪ!

ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸುವ ಮೂಲಕ ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ದರ್ಪ ಮೆರೆದಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಮಹಿಳಾ ಸಾಧಕರ ಜೊತೆ ರಾಹುಲ್ ಸಂವಾದ ಕಾರ್ಯಕ್ರಮ ನಿಗಧಿಯಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಇದು ಕೆಪಿಸಿಸಿ ಕಾರ್ಯಕ್ರಮ ಅಲ್ಲ ಎಐಸಿಸಿ ಕಾರ್ಯಕ್ರಮ ನೆನಪಿರಲಿ ಎಂದು, ಪೊಲೀಸರ ಮೂಲಕ ಮಾಧ್ಯಮದವರು ಒಳ ಪ್ರವೇಶಿಲು ತಡೆ ನೀಡಲಾಗಿದೆ. ಈ ಕುರಿತು ಮಾಧ್ಯಮಗಳು ಪ್ರಶ್ನಿಸಿದ ವೇಳೆಯಲ್ಲಿ ರಮ್ಯಾ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.      

short by NP / read more at Public TV