Skip to main content


ಜಯದ ಹಾದಿಗೆ ಸನ್‌ರೈಸರ್ಸ್

ಮಧ್ಯಮ ವೇಗದ ಬೌಲರ್‌ ಸಿದ್ದಾರ್ಥ್‌ ಕೌಲ್‌ (23ಕ್ಕೆ3) ಮತ್ತು ಬಸಿಲ್‌ ಥಂಪಿ (4ಕ್ಕೆ2) ಮಂಗಳವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಇವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 11ನೇ ಆವೃತ್ತಿಯ ಪಂದ್ಯದಲ್ಲಿ 31ರನ್‌ಗಳಿಂದ ಗೆದ್ದಿತು.  ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕೇನ್‌ ವಿಲಿಯಮ್ಸನ್‌ ಸಾರಥ್ಯದ ಸನ್‌ರೈಸರ್ಸ್‌ ತಂಡವು 20 ಓವರ್‌ಗಳಲ್ಲಿ 118 ರನ್‌ಗಳಿಗೆ ಆಲೌಟ್‌ ಆಯಿತು.ರೋಹಿತ್‌ ಶರ್ಮಾ ಪಡೆ 18.5 ಓವರ್‌ಗಳಲ್ಲಿ 87ರನ್‌ ಗಳಿಸಿ ಹೋರಾಟ ಮುಗಿಸಿತು.            

short by Prajwal / more at Prajavani

Comments