Skip to main content


ಸುಂದರ್‌ ಪಿಚೈಗೆ ಗೂಗಲ್‌ ಕಂಪೆನಿಯಿಂದ ಬಂಪರ್‌ ಪೇ ಡೇ ಕೊಡುಗೆ

ಭಾರತ ಸಂಜಾತ ಗೂಗಲ್‌ ಸಿಇಓ ಸುಂದರ ಪಿಚೈ ಅವರಿಗೆ ಗೂಗಲ್‌ ಕಂಪೆನಿಯು ಈ ವಾರ 2,524 ಕೋಟಿ ರೂ (380 ದಶಲಕ್ಷ ಡಾಲರ್‌) ಮೌಲ್ಯದ ತನ್ನ ನೋಂದಾಯಿತ ಶೇರುಗಳ Pay-day Gift ನೀಡಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 2014ರಲ್ಲಿ ಭಡ್ತಿ ನೀಡಲಾಗಿದ್ದ ವೇಳೆ ಪಿಚೈ ಅವರಿಗೆ ಗೂಗಲ್‌ ಕಂಪೆನಿಯು ತನ್ನ 3,53,939 ನೋಂದಾಯಿತ ಶೇರುಗಳನ್ನು ನೀಡಿತ್ತು. ಪಿಚೈ ಅವರಿಗೆ ಈ ವಾರ 38 ಕೋಟಿ ಡಾಲರ್‌ ಮೌಲ್ಯದ ಗೂಗಲ್‌ ನೋಂದಾಯಿತ ಶೇರುಗಳು ಸಿಗಲಿದ್ದು ಇದು ಈಚಿನ ವರ್ಷಗಳಲ್ಲಿ ಸಾರ್ವಜನಿಕ ರಂಗದ ಕಂಪೆನಿಯೊಂದರ ಕಾರ್ಯನಿರ್ವಹಣಾಧಿಕಾರಿಗೆ ದೊರಕುತ್ತಿರುವ ಅತೀ ದೊಡ್ಡ ಏಕಗಂಟಿನ ಶೇರು ರೂಪದ ಪಾವತಿಯಾಗಿದೆ ಎಂದು ವರದಿಗಳು ತಿಳಿಸಿವೆ.            

short by NP / more at Udayavani Kannada

Comments