Skip to main content


"ದಿ ವಿಲನ್" ಟೀಸರ್ ಯಾವಾಗ? ನಮ್ ಪ್ರಶ್ನೆಗೆ, ಪ್ರೇಮ್ ಕೊಟ್ಟ ಉತ್ತರ!

'ದಿ ವಿಲ್ಲನ್ ಟೀಸರ್ ಯಾವಾಗ?? ಇದೊಂದು ದೊಡ್ಡ ಪ್ರಶ್ನೆ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಚರ್ಚೆ ಆಗುತ್ತಿರುವ ಕನ್ನಡ ಸಿನಿಮಾ ವಿಷಯಗಳಲ್ಲಿ ಪ್ರಮುಖವಾಗಿದ್ದು 'ದಿ ವಿಲನ್' ಸಿನಿಮಾ ಬಗ್ಗೆ.ಹಾಗಾದರೆ, 'ದಿ ವಿಲನ್' ಟೀಸರ್ ಯಾವಾಗ?, ಸಿನಿಮಾದ ಟೀಸರ್ ಬಿಡುಗಡೆಗೆ ಯಾಕೆ ಇಷ್ಟೊಂದು ತಡ ಆಗುತ್ತಿದೆ? ಎಂಬ ನಮ್ಮ ಪ್ರಶ್ನೆಗೆ ನಿರ್ದೇಶಕ ಪ್ರೇಮ್ ಉತ್ತರಿಸಿದ್ದಾರೆ. ''ದಿ ವಿಲನ್' ಸಿನಿಮಾದ ಟೀಸರ್ ರೆಡಿ ಆಗಿದೆ. ಅದನ್ನು ಅಣ್ಣಾವ್ರ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಬೇಕು ಅಂತ ಪ್ಲಾನ್ ಮಾಡಿದ್ದೆ. ಆದರೆ ಆಗಲಿಲ್ಲ. ಇನ್ನೂ ಎರಡು ಹಾಡು ಬಾಕಿ ಇದೆ. ಒಂದು ಶಿವಣ್ಣನ ಹಾಡು, ಮತ್ತೊಂದು ಸುದೀಪ್ ಅವರ ಹಾಡು. ನಾನು ಇದನ್ನು ಮೊದಲು ಮುಗಿಸಬೇಕಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮುಗಿದ ನಂತರ ಟೀಸರ್ ರಿಲೀಸ್ ಮಾಡುತ್ತೇವೆ. ಈ ಎರಡು ಹಾಡುಗಳು ಮುಗಿದ ಮೇಲೆ ಇಡೀ ಚಿತ್ರದ ಚಿತ್ರೀಕರಣ ಪೂರ್ಣ ಆಗಿ ಕುಂಬಳಕಾಯಿ ಒಡೆಯುತ್ತೇವೆ. ನನ್ನ ಹಿಂದಿನ ಎಲ್ಲ ಸಿನಿಮಾಗಳು ಸಹ ಶೂಟಿಂಗ್ ಮುಗಿದ ನಂತರವೇ ಟೀಸರ್, ಟ್ರೇಲರ್ ರಿಲೀಸ್ ಮಾಡಿರುವುದು ಎಂದು ಪ್ರೇಮ್ ಮೌನ ಮುರಿದರು.

short by: Nithin


Comments