Skip to main content


ರಾಜ್ಯ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಎಂಟ್ರಿ : ಯಾವ ಕ್ಷೇತ್ರದಿಂದ ಪ್ರಚಾರ ಆರಂಭ ಗೊತ್ತಾ?

ಇಂದಿರಾ ಗಾಂಧಿಗೆ ರಾಜಕೀಯ ಮರುಹುಟ್ಟು ನೀಡಿದ್ದ ಚಿಕ್ಕಮಗಳೂರಿನಿಂದ ಇನ್ನೊಮ್ಮೆ ಭಾವನಾತ್ಮಕ ಸ್ಪರ್ಶ ನೀಡಲು ಕೈ ನಾಯಕರು ಮುಂದಾಗಿದ್ದು ಈ ನಿಟ್ಟಿನಲ್ಲಿ ಪ್ರಿಯಾಂಕಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷ  ರಾಹುಲ್ ಗಾಂಧಿ ಜತೆ ಸೇರಿ ಚಿಕ್ಕಮಗಳೂರು ಸೇರಿದಂತೆ ಎರಡು ಕಡೆ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ. ಸದ್ಯಮಟ್ಟಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸದ್ಯ ಪ್ರಿಯಾಂಕ ಗಾಂಧಿಯವರ ಪ್ರಚಾರ ಕಾರ್ಯಕ್ರಮದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಪ್ರಚಾರಕ್ಕೆ ಪ್ರಿಯಾಂಕಾ ಗಾಂಧಿ ಬರುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ. ಪ್ರಿಯಾಂಕಗಾಂಧಿಯವರ ಈ ಸಮಾವೇಶಗಳು  ಚಿಕ್ಕಮಗಳೂರು, ಮಂಗಳೂರು, ಸೇರಿದಂತೆ ಕರಾವಳಿ ಭಾಗ ಮಲೆನಾಡು ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನನ್ನಷ್ಟು ಎನರ್ಜಿ ಬೂಸ್ಟರ್ ಆಗಲಿದೆ ಅಂತ ಹೇಳುತ್ತಿದ್ದಾರೆ ರಾಜಕೀಯ ಪಂಡಿತರು. ಆದರೆ ಪ್ರಿಯಾಂಕಗಾಂಧಿಯವರ ಎಷ್ಟರ ಮಟ್ಟಿಗೆ ರಾಜ್ಯದ ಮತದಾರನ ಮೇಲೆ ಪ್ರಭಾವ ಬೀರಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನುವುದು ಚುನಾವಣೆ ಫಲಿತಾಂಶ ಬಂದ ವೇಳೆಯಲ್ಲಿ ತಿಳಿಯಲಿದೆ.      

short by Pawan / read more at Kannada News Now

Comments