Skip to main content


ಭರ್ಜರಿ ಊಟ ಮಾಡಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಕಾಂಗ್ರೆಸ್ ನಾಯಕರು

ಬಗೆಬಗೆಯ ಮೆನುವಿನ ಭರ್ಜರಿ ಊಟ ಮಾಡಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಕಾಂಗ್ರೆಸ್ ನಾಯಕರ ಭಾವಚಿತ್ರ ಎಲ್ಲಡೆ ವೈರಲ್ ಆಗಿದೆ.ದೆಹಲಿ ಪ್ರಮುಖ ಕಾಂಗ್ರೆಸ್ ಮುಖಂಡ ಅಜಯ್ ಮೆಕಾನ್ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಿಬಿಎಸ್'ಸಿ ಪ್ರಶ್ನೆಪತ್ರಿಕೆ ಸೋರಿಕೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ,ಕಾವೇರಿ ವಿವಾದ ಮುಂತಾದ ವಿಷಯಗಳಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಒಂದು ದಿನದ ಉಪವಾಸ ಕೈಕೊಳ್ಳಲು ತೀರ್ಮಾನಿಸಿತ್ತು.ಉಪವಾಸ ಕೈಗೊಳ್ಳುವ ಮುಂಚೆ ಕಾಂಗ್ರೆಸ್ ನಾಯಕರು ಸ್ಥಳೀಯ ಹೋಟೆಲ್'ನಲ್ಲಿ ಭರ್ಜರಿ ಊಟ ಸೇವಿಸಿದ್ದಾರೆ. ಮುಖಂಡರು ಊಟ ಸೇವಿಸಿ ಉಪವಾಸ ಕೈಗೊಂಡ ದೃಶ್ಯ ಎಲ್ಲದೆ ವೈರಲ್ ಆಗಿ ಸಾಮಾಜಿಕ ಮಾಧ್ಯಮಗಳಲ್ಲಿ ನಾಯಕರ ವಿರುದ್ಧ ಬೈಗುಳಗಳ ಸುರಿಮಳೆಯೆ ಹರಿದಿದೆ.

short by: Nithin / read more at Suvarnanews Tv

Comments