Skip to main content


ಅನಾರೋಗ್ಯದ ಪುಟ್ಟ ಅಭಿಮಾನಿಗೆ ಅಪಾರ ಪ್ರೀತಿ ನೀಡಿದ "ದಾಸ"

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಯಜಮಾನ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಶುರುವಾಗಿದ್ದು ಶೂಟಿಂಗ್ ಸಮಯದಲ್ಲಿ ಒಬ್ಬ ಅಭಿಮಾನಿಯನ್ನ ಭೇಟಿ ಮಾಡಿದ್ದಾರೆ. ಆಕೆಯ ಹೆಸರು ಪೂರ್ವಿಕಾ. ದರ್ಶನ್ ಭೇಟಿ ಮಾಡಿರುವ ಪೂರ್ವಿಕಾ ಎಂಬ ಬಾಲಕಿ ಸಾಕಷ್ಟು ದಿನಗಳಿಂದ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದಾರೆ. ಅಷ್ಟೇ ಅಲ್ಲದೆ ಹೊಟ್ಟೆಯಲ್ಲಿ ಕೆಟ್ಟ ನೀರು ತುಂಬಿಕೊಂಡು ನೋವು ಅನುಭವಿಸುತ್ತಿದ್ದಾಳೆ. 11 ವರ್ಷದ ಪೂರ್ವಿಕಾ ಸುಮಾರು 5-6 ವರ್ಷದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ. ಮಂಡ್ಯ ನಿವಾಸಿ ಆಗಿರುವ ಪೂರ್ವಿಕಾ ಸದ್ಯ ಚಿಕಿತ್ಸೆಗಾಗಿ ಚಿಕ್ಕಮಗಳೂರಿನಲ್ಲೇ ಇದ್ದಾರೆ.       

short by Pawan / read more at 60secondsnow

Comments