Skip to main content


ಹೊಸ ಚಿತ್ರ ಇಲ್ಲದ ಕಾರಣ ತಮಿಳ್ನಾಡಲ್ಲಿ ಶಕೀಲಾ ಚಿತ್ರಗಳ ಭರ್ಜರಿ ಹಬ್ಬ!

ವರ್ಚುವಲ್‌ ಪ್ರಿಂಟ್‌ ಶುಲ್ಕ (ವಿಪಿಎಫ್‌) ಹೆಚ್ಚಳ ಖಂಡಿಸಿ ತಮಿಳುನಾಡಿನಲ್ಲಿ ಯಾವುದೇ ಹೊಸ ಚಲನಚಿತ್ರ ಬಿಡುಗಡೆ ಮಾಡದೇ ಇರಲು ಚಿತ್ರರಂಗ ನಿರ್ಧರಿಸಿ ಅದಾಗಲೇ 40 ದಿನ ಕಳೆದಿವೆ.

ಪರಿಣಾಮ ರಾಜ್ಯದ ಚಲನಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಚಿತ್ರಗಳ ಕೊರತೆ ಎದುರಾಗಿದೆ. ಈ ನಡುವೆ ಹೊಸ ಚಿತ್ರಗಳ ಕೊರತೆಯ ಲಾಭವನ್ನು ಸದುಪಯೋಗಪಡಿಸಿಕೊಂಡಿರುವ ಇಲ್ಲಿನ ಕೋವಾಯ್‌ನಲ್ಲಿರುವ ಚಿತ್ರಮಂದಿರವೊಂದು ಭರ್ಜರಿ ಹಣ ಗಳಿಕೆ ಮಾಡುತ್ತಿದೆ.

ಹಾಗಂತ ಅಲ್ಲೇನು ಹೊಸ ಚಿತ್ರಗಳನ್ನು ಬಿಡುಗಡೆ ಮಾಡುತ್ತಿಲ್ಲ. ದಕ್ಷಿಣ ಭಾರತದ ನೀಲಿ ಚಿತ್ರಗಳ ರಾಣಿ ಎಂದೇ ಖ್ಯಾತರಾಗಿದ್ದ ಶಕೀಲಾ ಅಭಿನಯದ ಮಲಯಾಳಂನಿಂದ ತಮಿಳಿಗೆ ಡಬ್‌ ಆದ ಹಳೆಯ ನೀಲಿ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳನ್ನು ಇಲ್ಲಿನ ಜನ ಮುಗಿ ಬಿದ್ದು ನೋಡ್ತಿದ್ದಾರಂತೆ.

short by: Nithin / read more at Suvarnanews Tv

Comments