Skip to main content


ಮತದಾರರಿಗೆ ರಾಕಿಂಗ್ ಸ್ಟಾರ್ ಯಶ್ ಕೊಟ್ಟ ಸಲಹೆ ಏನು ಗೊತ್ತಾ?

ಸಂದರ್ಶನವೊಂದರಲ್ಲಿ ಮಾತನಾಡಿದ ಯಶ್, ರಾಜಕಾರಣಿಗಳು ಚುನಾವಣಾ ಪ್ರಚಾರ ಅಂದ್ರೆ ಬರೀ ಕೋಟಿ ಕೋಟಿ ಹಣ ಖರ್ಚು ಮಾಡಿ ದೊಡ್ಡ ಸಮಾವೇಶ ಮಾಡುವುದು ಅಷ್ಟೇ ಎಂದುಕೊಂಡಿದ್ದಾರೆ. ಒಬ್ಬ ಅಭ್ಯರ್ಥಿಗೆ ತಾನು ಸ್ಪರ್ಧಿಸುವ ಕ್ಷೇತ್ರಕ್ಕೆ ಏನು ಬೇಕು, ತಾನು ಏನು ಕೆಲಸ ಮಾಡಬೇಕು ಎನ್ನುವುದು ಗೊತ್ತಿರುವುದಿಲ್ಲ ಎಂದರು. ಇನ್ನು ಚುನಾವಣೆಯಲ್ಲಿ ಗೆಲ್ಲಿಸಿದ ಪ್ರತಿನಿಧಿಯನ್ನು ಸುಮ್ಮನೆ ಬಿಟ್ಟು ಬಿಡುವುದಲ್ಲ. ಪ್ರತಿವಾರ, ಪ್ರತಿತಿಂಗಳು ಟಾರ್ಗೆಟ್ ಕೊಡಬೇಕು. ಆಯಾ ಕಾಲದಲ್ಲಿ ಆಗಬೇಕಾದ ಕೆಲಸ ಆಗಿಲ್ಲವೆಂದರೆ ಆ ಕ್ಷೇತ್ರದ ಹಿರಿಯರು ಪ್ರಜ್ಞಾವಂತರು ಸಂಘಟನೆ ಮಾಡಿಕೊಂಡು ಪ್ರತಿನಿಧಿಯನ್ನು ಹಾಕ್ಕೊಂಡು ರುಬ್ಬಬೇಕು ಎಂದಿದ್ದಾರೆ.   

short by Pawan / read more at Kannada News Now