Skip to main content


ನಟಿ ಅನುಷ್ಕಾ ಶರ್ಮಾಗೆ ದಾದಾ ಸಾಹೇಬ್ ಫಾಲ್ಕೆ ಗೌರವ

2018 ದಾದಾ ಸಾಹೇಬ ಫಾಲ್ಕೆ' ಪ್ರಶಸ್ತಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ' ಭಾಜನರಾಗಲಿದ್ದಾರೆ. ಇದು ಅವರ ನಟನೆಗೆ ಬರುತ್ತಿಲ್ಲ. ಬದಲಾಗಿ ಚಿತ್ರಗಳ ನಿರ್ಮಾಣದಲ್ಲಿ ಮಾಡಿದ ಅಮೋಘ ಸಾಧನೆ ಗುರುತಿಸಿ ಈ ಗೌರವ ನೀಡಲಾಗುತ್ತಿದೆ. ಅನುಷ್ಕಾ ಶರ್ಮಾ 25 ನೇ ವಯಸ್ಸಿನಲ್ಲೇ ಟಾಪ್ ನಟಿಯಾಗಿದ್ದರು. ಜೊತೆಗೆ ತಮ್ಮದೇ ಸಂಸ್ಥೆಯೊಂದಿಗೆ ಚಿತ್ರಗಳ ನಿರ್ಮಾಣ ಮಾಡಲು ಆರಂಭಿಸಿದ್ದರು. ಅವರ ಬ್ಯಾನರ್ ಅಡಿಯಲ್ಲಿ 'ಎನ್‌ಎಚ್‌ 10' ಎನ್ನುವ ಮೊದಲ ಚಿತ್ರ ರೆಡಿಯಾಗಿತ್ತು. ಇದಾದ ಬಳಿಕ ಪಿಲ್ಲೌರಿ ಹಾಗೂ ಪರಿ ಎನ್ನುವ ಚಿತ್ರಗಳು ಬಂದಿದ್ದು, ಮೂರೂ ಕೂಡ ಹಿಟ್ ಆಗಿದೆ. ಈ ಮೂಲಕ ಅತೀ ಕಿರಿಯ ನಿರ್ಮಾಪಕಿ ಎನಿಸಿಕೊಂಡಿದ್ದಾರೆ.

short by: Nithin / read more at 60secondsnow