Skip to main content


ಭಾರತೀಯ ಗೇಮ್ಸ್‌ ತಂಡಕ್ಕೆ ಪ್ರಧಾನಿ ಮೋದಿ ಶುಭ ಹಾರೈಕೆ

ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತೀಯ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. "ಕ್ರೀಡಾಪಟುಗಳ ಬೆನ್ನಿಗೆ ಇಡೀ ದೇಶವೇ ಇದೆ' ಎಂದು ಹುರಿದುಂಬಿಸಿದ್ದಾರೆ."ಗೋಲ್ಡ್‌ಕೋಸ್ಟ್‌ 2018ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳಿಗೆ ಒಳ್ಳೆಯದಾಗಲಿ. ಕ್ರೀಡಾರಂಗದಲ್ಲಿ ಬಹಳಷ್ಟು ಶ್ರಮಿಸಿರುವ ಎಲ್ಲಾ ಕ್ರೀಡಾಳುಗಳಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಅದ್ಭುತ ಅವಕಾಶವಾಗಲಿ. ಪ್ರತೀ ಭಾರತೀಯನೂ ನಮ್ಮ ತಂಡವನ್ನು ಬೆಂಬಲಿಸುತ್ತಿದ್ದಾನೆ...' ಎಂದು ಪ್ರಧಾನಿ ಮೋದಿ ಸ್ಫೂರ್ತಿದಾಯಕವಾಗಿ ಟ್ವೀಟ್‌ ಮಾಡಿದ್ದಾರೆ.

short by: Nithin /read more at Udayavani

Comments