Skip to main content


ಬಹು ವರ್ಷಗಳ ಬಳಿಕ ಗೆಳೆಯ ವಿಷ್ಣುವರ್ಧನ್ ಮನೆಗೆ ತೆರಳಿದ ರೆಬೆಲ್ ಸ್ಟಾರ್!

ರೆಬೆಲ್ ಸ್ಟಾರ್ ಅಂಬರೀಶ್ ಬಹಳ ವರ್ಷಗಳ ಬಳಿಕ ತನ್ನ ಆತ್ಮೀಯ ಗೆಳೆಯ ವಿಷ್ಣುವರ್ಧನ್ ಮನೆಗೆ ಭೇಟಿ ನೀಡಿದ್ದಾರೆ. ಜಯನಗರದಲ್ಲಿ ಅಂಬರೀಶ್ ನಟನೆಯ “ಅಂಬಿ ನಿಂಗ್ ವಯಸ್ಸಾಯತ್ತೋ” ಚಿತ್ರೀಕರಣ ನಡೆಯುತ್ತಿದ್ದು, ಈ ವೇಳೆ ಹತ್ತಿರದಲ್ಲೇ ಇದ್ದ ವಿಷ್ಣುವರ್ಧನ್ ಮನೆಗೆ ತೆರಳಿ ಸದಸ್ಯರ ಕುಶಲೋಪರಿ ವಿಚಾರಿಸಿದ್ದರು. ಭಾರತಿ ವಿಷ್ಣುವರ್ಧನ್ ಜೊತೆ ಕೆಲ ಕಾಲ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಸದ್ಯ ಅಂಬರೀಶ್ ರಾಜಕೀಯದಿಂದ ದೂರವಿದ್ದು, ಅಂಬಿ ನಿಂಗ್ ವಯಸ್ಸಾಯತ್ತೋ ಚಿತ್ರದ ಶೂಟಿಂಗ್ ನಲ್ಲಿ ತಮ್ಮನು ತಾವು ತೊಡಗಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಜೂನಿಯರ್ ಅಂಬಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕಿಚ್ಚನಿಗೆ ಜೋಡಿ ಆಗಿ ಮುಗೂತಿ ಸುಂದರಿ ಶೃತಿ ಹರಿಹರನ್ ಅಭಿನಯಿಸುತ್ತಿದ್ದಾರೆ.     

short by Pawan / more at Public Tv

Comments