Skip to main content


"ಆ ಕ್ಷಣ ಎಲ್ಲವೂ ಮುಗಿದು ಹೋಯಿತು ಎಂದುಕೊಂಡೆ" ಎಂದ ರಾಹುಲ್

ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ಕೂಡಲೇ ತಾನು ರಾಜಕೀಯದಿಂದ 10 ದಿನಗಳ ವಿರಾಮ ತೆಗೆದುಕೊಂಡು ಕೈಲಾಸ ಮಾನಸಸರೋವರ ತೀರ್ಥಯಾತ್ರೆಗೈಯ್ಯುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರವಿವಾರ ಘೋಷಿಸಿದ್ದಾರೆ. ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಜನ ಆಕ್ರೋಶ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ತಾವು ದಿಲ್ಲಿಯಿಂದ ಕರ್ನಾಟಕಕ್ಕೆ ತೆರಳುತ್ತಿದ್ದ ಚಾರ್ಟರ್ಡ್ ವಿಮಾನವೊಂದು ಹುಬ್ಬಳ್ಳಿಯಲ್ಲಿ ಭೂಸ್ಪರ್ಶ ಮಾಡುವಂತಹ ಸಂದರ್ಭ ವಿಮಾನದಲ್ಲಿ ತಲೆದೋರಿದ ತಾಂತ್ರಿಕ ದೋಷದ ಬಗ್ಗೆ ಮಾತನಾಡಿದರು. ‘‘ಎರಡು ಮೂರು ದಿನಗಳ ಹಿಂದೆ ನಾನು ಕರ್ನಾಟಕಕ್ಕೆ ಪ್ರಯಾಣಿಸುತ್ತಿದ್ದಾಗ ವಿಮಾನ ಒಮ್ಮೆಗೇ 8,000 ಅಡಿ ಕೆಳಕ್ಕಿಳಿದಿತ್ತು. ಎಲ್ಲವೂ ಮುಗಿದು ಹೋಯಿತು ಎಂದು ನಾನಂದುಕೊಂಡೆ. ಆ ರೀತಿ ಯೋಚಿಸಿದಾಕ್ಷಣ ನನಗೆ ಕೈಲಾಸ ಮಾನಸಸರೋವರಕ್ಕೆ ಹೋಗಬೇಕೆನಿಸಿತು,’’ ಎಂದು ನೆರೆದಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರ ಕರತಾಡನದ ನಡುವೆ ಹೇಳಿದರು.     

short by Pawan / more at Varthabharathi

Comments