Skip to main content


ನೆಲ್ಸನ್ ಮಂಡೇಲಾ ಮಾಜಿ ಪತ್ನಿ ವಿನ್ನಿ ಮಂಡೇಲಾ ಇನ್ನಿಲ್ಲ.

ದಕ್ಷಿಣ ಅಫ್ರಿಕಾದ ವರ್ಣ ಭೇದ ನೀತಿ ವಿರುದ್ದ ತಮ್ಮ ಪತಿ ನೆಲ್ಸನ್ ಮಂಡೇಲಾ ಜೊತೆ ಕೈಜೋಡಿಸಿ ಅದನ್ನು ಅಂತ್ಯಗೊಳಿಸಲು ಶ್ರಮಿಸಿದ್ದ 81 ವರ್ಷದ ವಿನ್ನಿ ಮಂಡೇಲಾ ಬಹು ಕಾಲದ ಅನಾರೋಗ್ಯದ ಬಳಿಕ ಸೋಮವಾರದಂದು ನಿಧನರಾಗಿದ್ದಾರೆ.ವರ್ಣಭೇದ ನೀತಿ ವಿರುದ್ದ ಹೋರಾಟ ಕೈಗೊಂಡಿದ್ದ ಪತಿ ನೆಲ್ಸನ್ ಮಂಡೇಲಾ ಸತತ 27 ವರ್ಷಗಳ ಕಾಲ ಜೈಲು ವಾಸಿಯಾಗಿದ್ದ ವೇಳೆ ಈ ಹೋರಾಟವನ್ನು ಮುನ್ನಡೆಸಿದ್ದ ವಿನ್ನಿ ಮಂಡೇಲಾ ಕೆಲವು ಕಾರಣಗಳಿಂದಾಗಿ ವಿವಾದಕ್ಕೂ ತುತ್ತಾಗಿದ್ದರು.ನೆಲ್ಸನ್ ಮಂಡೇಲಾ ಜೈಲಿನಿಂದ ಬಿಡುಗಡೆಗೊಂಡ ವೇಳೆ ಅವರನ್ನು ಕೈ ಹಿಡಿದುಕೊಂಡು ಕರೆದುಕೊಂಡು ಬಂದಿದ್ದ ವಿನ್ನಿ ಮಂಡೇಲಾ, ಬಳಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ಪತಿಯಿಂದ ದೂರವಾಗಿದ್ದರು. ಇದೀಗ 81 ವರ್ಷದ ವಿನ್ನಿ ಮಂಡೇಲಾ ನಿಧನರಾಗಿದ್ದು, ಅವರ ಆಪ್ತ ವಲಯ ಸಾವಿನ ಸುದ್ದಿಯನ್ನು ಖಚಿತಪಡಿಸಿದೆ.

short by: Nithin /read more at Kannadadunia

Comments