Skip to main content


ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡ ತಮನ್ನಾ!

ಹೌದು, ಅತೀ ಸಣ್ಣ ವಯಸ್ಸಿನಲ್ಲೇ ತಮನ್ನಾರವರು ದೊಡ್ಡ ಮಟ್ಟದ ಪ್ರಶಸ್ತಿಗೆ ಪಾತ್ರರಾಗಿರುವುದು ದಕ್ಷಿಣ ಚಿತ್ರರಂಗಕ್ಕೆ ಹರ್ಷ ತಂದಿದೆ. ವಿಶೇಷವಾಗಿ ಕಳೆದ ವರ್ಷ ತೆರೆ ಕಂಡು ಬಾರೀ ಯಶಸ್ಸು ಗಳಿಸಿದ್ದ ಬಾಹುಬಲಿ ಸಿನಿಮಾದಲ್ಲಿನ ಅವಂತಿಕಾ ಪಾತ್ರದಲ್ಲಿ ವೀರ ನಾರಿಯಾಗಿ ಸಾಮಾಜಿಕ ಒಳತಿಗಾಗಿ ಯುದ್ದಕ್ಕೆ ಸನ್ನದ್ದರಾಗುವ ನಿಟ್ಟಿನಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಪಾತ್ರ ಗಮನಾರ್ಹ ವಾಗಿರುವುದರಿಂದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯರು ತಮನ್ನಾ ಅವರ ಹೆಸರನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಬರುವ ಏಪ್ರಿಲ್ 21ಕ್ಕೆ ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದ್ದು, ಬಾಲಿವುಡ್ ನಟ ರಣವೀರ್ ಸಿಂಗ್ ಹಾಗು ಮಿಲ್ಕಿ ಬ್ಯೂಟಿ ತಮನ್ನಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವುದರ ಮೂಲಕ ಗೌರವಿಸಲಾಗುವುದು ಎಂದು ಮೂಲಗಳು ತಿಳಿಸಿವೆ.   
 
short by Pawan / read more at Balkani News