Skip to main content


'ದಿ ವಿಲನ್’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ದಿ ವಿಲನ್’ ಚಿತ್ರ ಆರಂಭವಾಗಿ ವರ್ಷವಾಗುತ್ತಾ ಬಂದಿದ್ದು, ಚಿತ್ರದ ಕುರಿತಾಗಿ ಅಭಿಮಾನಿಗಳ ಕುತೂಹಲ ಹೆಚ್ಚಾಗ್ತಿದೆ.‘ಜೋಗಿ’ ಪ್ರೇಮ್ ನಿರ್ದೇಶನ, ಸಿ.ಆರ್. ಮನೋಹರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರದ ಚಿತ್ರೀಕರಣ ಕರ್ನಾಟಕ ಮಾತ್ರವಲ್ಲದೇ, ದೇಶ-ವಿದೇಶಗಳಲ್ಲಿಯೂ ನಡೆದಿದೆ. ಬಹು ತಾರಾಗಣದಲ್ಲಿ, ಅದ್ಧೂರಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಿದೆ. ಚಿತ್ರೀಕರಣ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಒಂದಿಷ್ಟು ಕೆಲಸಗಳು ಬಾಕಿ ಇವೆ. ಇದಾದ ಬಳಿಕ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಿ ಶೀಘ್ರವೇ ಚಿತ್ರವನ್ನು ತೆರೆಗೆ ತರಲು ಪ್ಲಾನ್ ಮಾಡಲಾಗಿದೆ. ಈ ನಡುವೆ ಇದೇ ತಿಂಗಳಲ್ಲಿ ಚಿತ್ರದ ಟೀಸರ್ ಬಿಡುಗಡೆಗೂ ಪ್ಲಾನ್ ಮಾಡಲಾಗಿದೆ.

short by: Nithin / read more at KannadaDunia


Comments