Skip to main content


ಮಲೇಷ್ಯಾವನ್ನು ಮಣಿಸಿದ ಭಾರತ

ಲಭಿಸಿದ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳ ಪೈಕಿ ಎರಡನ್ನು ಸಮರ್ಥವಾಗಿ ಬಳಸಿಕೊಂಡ ಗುರುಜೀತ್ ಕೌರ್‌ ಭಾರತದ ಭರ್ಜರಿ ಜಯಕ್ಕೆ ಕಾರಣರಾದರು. ಶುಕ್ರವಾರ ನಡೆದ ಮಹಿಳೆಯರ ಹಾಕಿ ಪಂದ್ಯದಲ್ಲಿ ಭಾರತ 4–1ರಿಂದ ಮಲೇಷ್ಯಾವನ್ನು ಮಣಿಸಿತು. ಗುರುವಾರ ‘ಎ’ ಗುಂಪಿನ ಪಂದ್ಯದಲ್ಲಿ ವೇಲ್ಸ್ ವಿರುದ್ಧ 2–3ರಿಂದ ಸೋತಿದ್ದ ಭಾರತ ಶುಕ್ರವಾರ ಆರಂಭದಲ್ಲೇ ಪಾರುಪತ್ಯ ಸ್ಥಾಪಿಸಿತು. ಆರನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶ ಭಾರತದ ಮುನ್ನಡೆಗೆ ನೆರವಾಯಿತು. ಕೌರ್ ಗೋಲು ಗಳಿಸಿ ಮಿಂಚಿದರು. 56ನೇ ನಿಮಿಷದಲ್ಲಿ ನಾಯಕಿ ರಾಣಿ ರಾಂಪಾಲ್ ಮತ್ತು 59ನೇ ನಿಮಿಷದಲ್ಲಿ ಲಾಲ್‌ರೆಮ್‌ಸಿಯಾಮಿ ಗಳಿಸಿದ ಗೋಲುಗಳು ಭಾರತಕ್ಕೆ ಭರ್ಜರಿ ಜಯ ಗಳಿಸಿಕೊಟ್ಟವು.                 

Short by Prajwal / read more at Prajavani

Comments