Skip to main content


ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದ ಪೃಥ್ವಿ ಶಾ.. ಏನು ಗೊತ್ತಾ?

ಐಪಿಎಲ್ ಸೀಸನ್ 11 ರಲ್ಲಿ ಕಿರಿಯರ ಟೀಂ ಇಂಡಿಯಾದ ನಾಯಕ ಪೃಥ್ವಿ ಶಾ ಹೊಸ ದಾಖಲೆ ಬರೆದಿದ್ದಾರೆ. ಯೆಸ್, ಪೃಥ್ವಿ ಶಾ ಅವರು ನಿನ್ನೆ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅರ್ಧಶತಕ ಬಾರಿಸಿದ ಅತಿ ಕಿರಿಯ ಬ್ಯಾಟ್ಸ್ ಮೆನ್ ಎಂಬ ದಾಖಲೆಯನ್ನು ಸರಿಗಟ್ಟಿದ್ದಾರೆ.ಈ ಹಿಂದೆ ಕೇರಳದ ಸಂಜು ಸಾಮನ್ಸ್ ಈ ದಾಖಲೆ ಮಾಡಿದ್ದರು. ಶಾ ಹಾಗೂ ಸಂಜು 18 ವರ್ಷ 169 ದಿನಗಳಲ್ಲಿ ಈ ದಾಖಲೆ ಮಾಡಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಇವರಿಬ್ಬರ ನಂತರ 2016 ರಲ್ಲಿ ರಿಷಭ್ ಪಂತ್ 18 ವರ್ಷ 212 ದಿನಗಳು, 2017 ರಲ್ಲಿ ಇಶಾನ್ ಕಿಶನ್ 18 ವರ್ಷ 299 ದಿನಗಳಲ್ಲಿ ಅರ್ಧಶತಕ ಸಿಡಿಸಿದ್ದರು.   

short by Prajwal / more at Newspoint

Comments