Skip to main content


ಸಚಿನ್ ಮಾಡಿದ ಈ ಕೆಲಸಕ್ಕೆ ಇಡೀ ದೇಶವೇ ಅವರನ್ನ ಹೊಗಳುತ್ತಿದೆ

ಹೌದು ಸಚಿನ್ ಎಂದರೆ ಎಲ್ಲರಿಗೂ ಗೊತ್ತೇ ಇದೆ ಅವರು ಕೇವಲ ಕ್ರಿಕೆಟ್ ದೇವರು ಅಲ್ಲ ಜನರ ಪಾಲಿಗೆ ದೇವರು ಹೌದು. ಇತ್ತೀಚೆಗೆ ರಾಜ್ಯಸಭಾ ಸದಸ್ಯ ಅವಧಿ ಮುಗಿಸಿದ ಸಚಿನ್ ತೆಂಡೂಲ್ಕರ್ ತಮ್ಮ ಆರು ವರ್ಷಗಳ ಅವಧಿಯಲ್ಲಿ ಸರ್ಕಾರ ನೀಡಿದ್ದ ಸಂಪೂರ್ಣ ಸಂಬಳ ಹಾಗೂ ಭತ್ಯೆಯನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಸಚಿನ್ ತಮ್ಮ ಅವಧಿಯಲ್ಲಿ ಸುಮಾರು 90 ಲಕ್ಷ ರೂ. ಹಣವನ್ನು ವೇತನ ಹಾಗೂ ಭತ್ಯೆ ರೂಪದಲ್ಲಿ ಪಡೆದಿದ್ದರು. ಸಚಿನ್ ಅವರ ನಿರ್ಧಾರದ ಕುರಿತು ಪ್ರಧಾನಿಗಳ ಕಾರ್ಯಾಲಯ ಸಚಿನ್ ಅವರಿಗೆ ಪತ್ರವನ್ನು ಬರೆಯುವ ಮೂಲಕ ಗೌರವ ಸೂಚಿಸಿದೆ.

short by Pawan / read more at Karnataka Today

Comments