Skip to main content


ಎಲೆಕ್ಷನ್‌ ಬಳಿಕ ಕಟಪಾಡಿ ಕಟ್ಟಪ್ಪ ಎಂಟ್ರಿ

ಕೋಸ್ಟಲ್‌ವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷೆಯ ಚಿತ್ರ ಕಟಪಾಡಿ ಕಟ್ಟಪ್ಪ. ಬ್ರಹ್ಮಾವರ ಮೂವೀಸ್‌ ಲಾಂಛನದಲ್ಲಿ ತಯಾರಾಗುತ್ತಿರುವ ರಾಜೇಶ್‌ ಬ್ರಹ್ಮಾವರ ನಿರ್ದೇಶನದ ಈ ಚಿತ್ರದ ಡಬ್ಬಿಂಗ್‌ ಕಾರ್ಯ ಮುಗಿದಿದೆ. ಇತರ ತಾಂತ್ರಿಕ ಕೆಲಸಗಳು ನಡೆಯುತ್ತಿದೆ. ಮೇ ತಿಂಗಳಲ್ಲಿ ಸೆನ್ಸಾರ್‌ ಮುಂದೆ ಬರಲಿದ್ದು, ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಕಟಪಾಡಿ ಕಟ್ಟಪ್ಪ ಚಿತ್ರ ಕೆಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಇಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಒಂದೊಂದು ಕಥೆಗಳನ್ನು ಹೇಳುವ ರೀತಿಯಲ್ಲಿ ಚಿತ್ರ ರೆಡಿ ಮಾಡಲಾಗಿದೆ. ಬಿರುವೆರ್‌ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಲೀಡ್‌ ರೋಲ್‌ನೊಂದಿಗೆ ಕೋಸ್ಟಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

short by Pawan / read more at Vijayakarnataka