Skip to main content


ರಾಧಿಕಾ ಪಂಡಿತ್ ಅವರಿಗೆ ದರ್ಶನ್ ಅಭಿಮಾನಿಗಳ ಮನವಿ

ಕನ್ನಡ ಸಿನಿಮಾರಂಗದಲ್ಲಿ ದಶಕಗಳನ್ನ ಯಶಸ್ವಿಯಾಗಿ ಪೂರೈಸಿ, ಅದ್ಬುತ ಕಲಾವಿದೆಯಾಗಿ ಗುರುತಿಸಿಕೊಂಡ ನಟಿ ರಾಧಿಕಾ ಪಂಡಿತ್. ಇತ್ತೀಚಿಗಷ್ಟೆ ನಟಿ ರಾಧಿಕಾ ಪಂಡಿತ್ ಸನ್ ಗ್ಲಾಸ್ ಹಾಕಿಕೊಂಡು ಫೋಟೋವನ್ನ ಅಪ್ಲೋಡ್ ಮಾಡಿದ್ದರು. ಅದನ್ನ ನೋಡಿ ಸಾಕಷ್ಟು ಅಭಿಮಾನಿಗಳು ಖುಷಿಯನ್ನು ವ್ಯಕ್ತ ಪಡಿಸಿದ್ದರು. ಅದೇ ಪೋಟೋ ಕಮೆಂಟ್ ನಲ್ಲಿ ದಚ್ಚು ಫ್ಯಾನ್ಸ್ ರಾಧಿಕಾ ಅವರಿಗೆ ಡಿ ಬಾಸ್ ಜೊತೆ ಸಿನಿಮಾ ಮಾಡಿ ಎಂದು ಮನವಿ ಮಾಡಿದ್ದಾರೆ. ನಾಯಕಿ ಆಗಿ ಆಗದಿದ್ದರೂ ತಂಗಿಯಾಗಿ ಅಭಿನಯಿಸಿ ನಿಮ್ಮಬ್ಬರದ್ದು ಒಳ್ಳೆ ಜೋಡಿ ಆಗುತ್ತದೆ ಎಂದು ತಿಳಿಸಿದ್ದಾರೆ.

short by Pawan / read more at Filmibeat