Skip to main content


ವರುಣಾದಲ್ಲಿ ಯತೀಂದ್ರ ವರ್ಸಸ್ ವಿಜಯೇಂದ್ರ – ಮೈಸೂರಿನಲ್ಲಿ ಬೀಡುಬಿಟ್ಟ ಬಿಎಸ್‍ವೈ ಪುತ್ರ

ಟಿಕೆಟ್ ಕನ್ಫರ್ಮ್ ಮಾಡಿಕೊಂಡು ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ರಣತಂತ್ರ ರೂಪಿಸಲು ವರುಣಾ ಕ್ಷೇತ್ರಕ್ಕೆ ಇಂದಿನಿಂದ ಧುಮುಕಲಿದ್ದಾರೆ. ಸೋಮವಾರದಿಂದ ಸಂಪೂರ್ಣ ಪ್ರಚಾರಕ್ಕೆ ಇಳಿಯಲಿದ್ದು, ಇಂದು ವರುಣಾ ಕ್ಷೇತ್ರದಲ್ಲಿ ಸಭೆ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಮೈಸೂರಿಗೆ ಆಗಮಿಸಿದ್ದು, ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ವಿರುದ್ಧ ಬಿ.ವೈ ವಿಜೇಂದ್ರ ಟಿಕೆಟ್ ನೀಡುವಂತೆ ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ವಿಜೇಂದ್ರ ಭೇಟಿ ಕುತೂಹಲ ಕೆರಳಿಸಿದೆ.     

short by NP / read more at Public TV