Skip to main content


ಬಾಲಿವುಡ್ ಸುಲ್ತಾನ್ ಗೆ ಸಿಗುತ್ತಾ ಇಂದು ಬೇಲ್?

ಕೃಷ್ಣ ಮೃಗ ಪ್ರಕರಣದಲ್ಲಿ ಅಪರಾಧಿಯಾಗಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಇಂದು ಜಾಮೀನುಗಾಗಿ ಅರ್ಜಿ ಸಲ್ಲಿಸಲಿದ್ದಾರೆ. ಸಲ್ಮಾನ್ ಖಾನ್ ಪರ ವಕೀಲ ಆನಂದ್ ದೇಸಾಯಿ ಇಂದು ಜಾಮೀನು ಕೋರಿ ಸೆಷನ್ ಕೋರ್ಟ್ ಮೋರೆ ಹೋಗಲಿದ್ದಾರೆ. ಬೇಲ್ ನೀಡುವ ಸಂಬಂಧ ಬೆಳಗ್ಗೆ 10.30 ಕ್ಕೆ ವಿಚಾರಣೆ ನಡೆಯಲಿದೆ. ಇನ್ನು ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಜೋಧ್ ಪುರ್ ಜೈಲಿನಲ್ಲಿ ಒಂದು ರಾತ್ರಿ ಕಳೆದಿರುವ ಸಲ್ಮಾನ್ ಜೋಧ್ ಪುರದ ಸೆಂಟ್ರಲ್ ಜೈಲಿನಲ್ಲಿ ಇದಕ್ಕಿಂದ ಮೊದಲು ಒಟ್ಟು 18 ದಿನ ಜೈಲು ಶಿಕ್ಷೆ ಅನುಭವಿಸಿದ್ದಾರೆ.

short by Pawan / read more at Kannada News Now

Comments