Skip to main content


ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್‌ಗೆ ಸುಲಭ ಜಯ

ಕಾಮನ್‌ವೆಲ್ತ್ ಗೇಮ್ಸ್‌ನ ಬ್ಯಾಡ್ಮಿಂಟನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಸುಲಭ ಜಯ ಸಾಧಿಸಿದ ಭಾರತದ ಅಗ್ರ ಶ್ರೇಯಾಂಕದ ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಬುಧವಾರ ಕೇವಲ 18 ನಿಮಿಷಗಳಲ್ಲಿ ಕೊನೆಗೊಂಡ ಮೊದಲ ಪಂದ್ಯದಲ್ಲಿ ಸಿಂಧು ಫಿಜಿಯ ಅಂಡ್ರಾ ವೈಟ್‌ಸೈಡ್‌ರನ್ನು 21-6, 21-3 ನೇರ ಸೆಟ್‌ಗಳಿಂದ ಸೋಲಿಸಿದರು.     

ಪುರುಷರ ವಿಭಾಗದಲ್ಲಿ ಕೆ.ಶ್ರೀಕಾಂತ್ ಮಾರಿಷಸ್‌ನ ಆತೀಶ್ ಲುಬ್ಹಾರನ್ನು 21-13, 21-10 ಅಂತರದಿಂದ ಸೋಲಿಸಿದ್ದಾರೆ. ಭಾರತದ ಶಟ್ಲರ್‌ಗಳು ಟೀಮ್ ವಿಭಾಗದ ಸ್ಪರ್ಧೆಯಲ್ಲಿ ಪ್ರಾಬಲ್ಯ ಸಾಧಿಸಿದಂತೆಯೇ ವೈಯಕ್ತಿಕ ಸ್ಪರ್ಧೆಗಳಲ್ಲೂ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ. 

short by Prajwal / read more at Varthabharathi

Comments