Skip to main content


ಪವರ್​ ಸ್ಟಾರ್​ ಮತ್ತು ಮಿಲ್ಕಿ ಬ್ಯೂಟಿಯೊಂದಿಗೆ ಪೊತೀಸ್​ನಿಂದ ಪರಿಸರ ಜಾಗೃತಿ : ಏನಿದು ಅಭಿಯಾನ!

ರಾಜ್ಯಾದ್ಯಂತ ಬಿರು ಬೇಸಿಗೆ ಬಿಸಿ ತಟ್ಟಿದೆ. ಬಿಸಿಲಿನಿಂದ ಜನ ಕಂಗೆಟ್ಟಿ ಹೋಗಿದ್ದಾರೆ. ಏಫ್ಲ್ರಿಲ್​​ ತಿಂಗಳು ಶುರುವಾಗುತ್ತಿದ್ದಂತೆ ಜೀವಚರಗಳ ನೀರಿನ ಹಾಹಾಕಾರ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಮತ್ತು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಬೆಂಗಳೂರಿನ ಹಸಿರು ಜಾಗೃತಿ ಕುರಿತು ಅರಿವು ಮೂಡಿಸುತ್ತಿದ್ದಾರೆ. ಆದರೆ ಈ ಇಬ್ಬರು ಪೋತೀಸ್ ಬಟ್ಟೆ ಮಳಿಗೆಗೆ ಕೆಂಪೇಗೌಡ ಹೆಸರನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಬೆಂಗಳೂರಿನ ಜನರು ಬೇಸರ ಮಾಡಿಕೊಂಡಿದ್ದರು ಎಂಬ ಸುದ್ದಿ ಹರಿದಾಡಿತ್ತು.

ಪೋತೀಸ್​ ಮಾಲಿಕರು ಬೆಂಗಳೂರಿನ ಜನರಿಗೆ ಪರಿಸರ ಕಾಳಜಿ ಕುರಿತು ಆಸಕ್ತಿ ತೋರಿದ್ದಾರೆ. ಸುತ್ತಲಿನ ಪರಿಸರನ್ನು ಉಳಿಸಿಕೊಳ್ಳಲು ಒಂದು ಅವಕಾಶ ನೀಡಿದ್ದಾರೆ. ಅದೇನೆಂದರೆ ಪೋತಿಸ್​ ಮಳಿಗೆಯಲ್ಲಿ ಬಟ್ಟೆ ಕೊಂಡುಕೊಂಡರೆ ಖರೀದಿ ಮಾಡಿದವರಿಗೆ ಒಂದೊಂದು ಗಿಡವನ್ನು ನೀಡಲು ನಿರ್ಧಾರ ಮಾಡಿದ್ಯಂತೆ. ಪೋತಿಸ್​ ಕೇವಲ ವ್ಯಾಪರಕ್ಕೆ ಮಾತ್ರವಲ್ಲ ಪರಿಸರ ಕಾಳಜಿಗೂ ಮುಂದಾಗಿದೆ ಎಂಬುದನ್ನು ಸಿನಿಮಾ ಸ್ಟಾರ್ಸ್​ ಮೂಲಕ ತಿಳಿಸಿದ್ದಾರೆ.     

short by Pawan / read more at Bp9news


Comments