Skip to main content


ಐಪಿಎಲ್: ಚೆನ್ನೈ ತಂಡಕ್ಕೆ ಸೇರಲಿದ್ದಾರೆ ಇಂಗ್ಲೆಂಡ್ ಆಟಗಾರ

ಇಂಗ್ಲೆಂಡ್‌ನ ವೇಗದ ಬೌಲರ್ ಡೇವಿಡ್ ವಿಲ್ಲಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ನ್ಯೂಜಿಲೆಂಡ್‌ನ ಆಲ್‌ರೌಂಡರ್ ಮಿಷೆಲ್ ಸ್ಯಾಂಟ್ನರ್ ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ವಿಲ್ಲಿ ಅವರನ್ನು ಸೇರಿಸಿಕೊಳ್ಳಲು ಚೆನ್ನೈ ತಂಡ ಮುಂದಾಗಿದ್ದು, ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.

ಇಂಗ್ಲೆಂಡ್‌ ಕೌಂಟಿಯಲ್ಲಿ ಯಾರ್ಕ್‌ಶೈರ್ ಪರ ಆಡುತ್ತಿರುವ ವಿಲ್ಲಿ, ಅರ್ಧದಲ್ಲಿಯೇ ತಂಡವನ್ನು ತೊರೆದು ಐಪಿಎಲ್‌ನಲ್ಲಿ ಮುಖಮಾಡಿದ್ದಾರೆ. ಅವರ ಸೇರ್ಪಡೆಯಾದರೆ ಐಪಿಎಲ್‌ನಲ್ಲಿ ಆಡುವ ಇಂಗ್ಲೆಂಡ್‌ ಆಟಗಾರರ ಸಂಖ್ಯೆ 12ಕ್ಕೆ ಏರಲಿದೆ.       

Short by Prajwal / read more at Oneindia

Comments