Skip to main content


"ಗುಳ್ಟು" ಚಿತ್ರಕ್ಕೆ ಬಂತು ಮತ್ತೊಂದು ಮೆಗಾ ಆಫರ್ !

ಕಳೆದ ವಾರವಷ್ಟೇ ತೆರೆಕಂಡಿದ್ದ 'ಗುಳ್ಟು' ಚಿತ್ರಕ್ಕೆ ಎಲ್ಲರಿಂದಲೂ ಮೆಚ್ಚಗೆ ಸಿಗುತ್ತಿದೆ. ಸಿನಿ ಅಭಿಮಾನಿಗಳು, ಸಿನಿ ತಾರೆಯರು ಎಲ್ಲರೂ ಚಿತ್ರವನ್ನ ಒಪ್ಪಿಕೊಂಡು, ಮೆಚ್ಚಿಕೊಂಡು ಅಪ್ಪಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ಚಿತ್ರತಂಡಕ್ಕೊಂದು ಸಂತಸದ ಸುದ್ದಿ ಸಿಕ್ಕಿದೆ. ಕನ್ನಡದಲ್ಲಿ ಕಮಾಲ್ ಮಾಡುತ್ತಿರುವ ಗುಳ್ಟು ಸಿನಿಮಾ ಈಗ ಪರಭಾಷೆಯಲ್ಲೂ ಮೋಡಿ ಮಾಡಲು ಸಿದ್ದವಾಗುತ್ತಿದೆ. ಹೌದು, 'ಗುಳ್ಟು' ಸಿನಿಮಾದ ಯಶಸ್ಸು ನೋಡಿದ ಕೆಲವು ನಿರ್ಮಾಪಕರು 'ಗುಳ್ಟು' ಸಿನಿಮಾವನ್ನ ಮಲಯಾಳಂ ಮತ್ತು ತಮಿಳಿನಲ್ಲಿ ರೀಮೇಕ್ ಮಾಡಲು ಮನಸ್ಸು ಮಾಡಿದ್ದಾರೆ.

short by: Sp / read more at FilmiBeat