Skip to main content


ಮತ್ತೆ ಒಂದಾದ ಕೆಂಪೇಗೌಡ ಜೋಡಿ..

ಸುದೀಪ್ ರಾಗಿಣಿ ಜೋಡಿ ಕನ್ನಡ ಚಿತ್ರರಂಗದ ಬೆಸ್ಟ್ ಜೋಡಿಗಳಲ್ಲಿ ಒಂದಾಗಿದ್ದು, ಸುದೀಪ್ ಎತ್ತರಕ್ಕೆ ಸರಿ ಹೊಂದುವ ಸ್ಯಾಂಡಲ್ ವುಡ್ ನಟಿ ಅಂದರೆ ಅದು ರಾಗಿಣಿ. ಮೊದಲು 'ವೀರ ಮದಕರಿ' ಸಿನಿಮಾ ಮಾಡಿ ಗೆದ್ದ ಈ ಜೋಡಿ 'ಕೆಂಪೇಗೌಡ' ಸಿನಿಮಾದಲ್ಲಿಯೂ ಒಟ್ಟಿಗೆ ನಟಿಸಿತ್ತು. ಆದರೆ ಈಗ 'ಕೆಂಪೇಗೌಡ' ಸಿನಿಮಾದ ನಂತರ ಒಂದೇ ಚಿತ್ರದಲ್ಲಿ ಸುದೀಪ್ ಮತ್ತು ರಾಗಿಣಿ ಇಬ್ಬರು ನಟಿಸುತ್ತಿದ್ದಾರೆ. ಆದರೆ ಈ ಇಬ್ಬರು ಜೋಡಿಯಾಗಿ ಚಿತ್ರದಲ್ಲಿ ನಟಿಸುತ್ತಿಲ್ಲ. ರಾಗಿಣಿ ಅವರ ಹೊಸ ಸಿನಿಮಾ 'ಕಿಚ್ಚು' ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರ ಮಾಡಿದ್ದಾರೆ. ಸಿನಿಮಾದಲ್ಲಿ ಡಾಕ್ಟರ್ ಪಾತ್ರವನ್ನು ಸುದೀಪ್ ನಿರ್ವಹಿಸಿದ್ದಾರೆ, ಹಾಗೂ ತೆರೆಯ ಮೇಲೆ ಅವರು 10 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದಾರೆ.  

short by Pawan / read more at Balkani News


Comments