Skip to main content


ಐಪಿಎಲ್ ನಲ್ಲಿ ಶತಕೋಟಿ ಗಳಿಸಿ ಕೊಹ್ಲಿ ಹಿಂದಿಕ್ಕಿದ್ದಾರೆ ಇಬ್ಬರು ದಿಗ್ಗಜರು

ಐಪಿಎಲ್ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಆಟಗಾರರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂದಿದ್ದಾರೆ ಎಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಏಕೆಂದ್ರೆ ಕೊಹ್ಲಿಗಿಂತ ಮಹೇಂದ್ರ ಸಿಂಗ್ ಧೋನಿ ಹಾಗೂ ರೋಹಿತ್ ಶರ್ಮಾ ಮುಂದಿದ್ದಾರೆ. ಐಪಿಎಲ್ ಗಳಿಕೆಯಲ್ಲಿ ಧೋನಿ ಹಾಗೂ ಶರ್ಮಾ ಶತಕೋಟಿ ಮೊತ್ತದ ಗಡಿ ದಾಟಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಈವರೆಗೆ ಐಪಿಎಲ್ ನಲ್ಲಿ 107.84 ಕೋಟಿ ರೂಪಾಯಿ ಗಳಿಸಿದ್ದಾರೆ. ನಂತ್ರದ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಇದ್ದು ಅವ್ರು ಐಪಿಎಲ್ ನಲ್ಲಿ ಈವರೆಗೆ ಗಳಿಸಿದ ಹಣ 101.60 ಕೋಟಿ. ಟೀಂ ಇಂಡಿಯಾ ನಾಯಕ ಕೊಹ್ಲಿ ಈವರೆಗೆ 92.20 ಕೋಟಿ ಗಳಿಸಿದ್ದಾರೆ.        
   
Short by Prajwal / read more at kannadadunia