Skip to main content


ಬೈಕ್ ಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್ -ಓರ್ವ ಸಾವು

ಶಾಲಾ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮ ಬೈಕ್‍ನ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಸ್ತೆಯ ಮಂಟಪ ಗೇಟ್ ಬಳಿ ನಡೆದಿದೆ. ಆಂಧ್ರಪ್ರದೇಶ ಮೂಲದ ನಾಗೇಶ್(ಜಾನಿ) ಮೃತ ಬೈಕ್ ಹಿಂಬದಿ ಸವಾರ. ಎಂಡೆವೋರ್ ಅಕಾಡೆಮಿಗೆ ಸೇರಿದ ಶಾಲಾವಹನ ಬೈಕ್‍ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಕೆಳಗೆ ಬಿದಿದ್ದಾರೆ. ಹಿಂಬದಿ ಸವಾರನ ಮೇಲೆ ವಾಹನ ಹರಿದ ಪರಿಣಾಮ ನಾಗೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.        

short by NP / read more at Public TV     

Comments