Skip to main content


ಆರ್ ಸಿ ಬಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು..

ಕೊಹ್ಲಿ ಮುಂದಾಳತ್ವದ ಆರ್ ಸಿ ಬಿ ಮೂರು ಬಾರಿ ಫೈನಲ್ ತಲುಪಿದರು ಇದುವರೆಗೆ ಪ್ರಶಸ್ತಿ ಗೆದ್ದಿಲ್ಲ. ಆದರೆ ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿದೆ. ವಿರಾಟ್ , ವಿಲಿಯರ್ಸ್, ಹಾಗೂ ರಿಟೈನ್ ಆಗಿರುವ ಸರ್ಫರಾಜ್ ಮೇಲೆ ಜವಾಬ್ದಾರಿ ಹೆಚ್ಚಿದೆ. ಇನ್ನೂ ಲೆಗ್ ಸ್ಪಿನ್ನರ್ ಚಾಹಲ್ ಬೆಂಗಳೂರು ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ. ಮೆಕ್ ಕಲಾಮ್  ಜೊತೆ ಯಾರು ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎನ್ನುವ ಚಿಂತೆ ಆರ್ ಸಿ ಬಿ ಪಾಳೆಯದಲ್ಲಿದೆ. ಡಿ ಕಾಕ್, ಪಾರ್ಥಿವ್ , ವೋಹ್ರಾ, ಮನ್ ದೀಪ್  ಸಿಂಗ್ ಓಪನಿಂಗ್ ಲಿಸ್ಟ್ನಲ್ಲಿದ್ದಾರೆ. ಆಲ್ ರೌಂಡರ್ ವೋಕ್ಸ್, ಸುಂದರ್, ಪವನ್ ನೇಗಿ ಮೇಲೆ ಹೆಚ್ಚಿನ ಒತ್ತಡವಿದೆ. ಬೌಲಿಂಗ್ ವಿಭಾಗದ ನೆತ್ರತ್ವವನ್ನು ಯಾದವ್ ಹೊರದಲಿದ್ದಾರೆ. ಇವರೊಂದಿಗೆ ಸಿರಾಜ್ ಉತ್ತಮ ಸಾಥ್ ನೀಡಬೇಕಾಗಿದೆ. ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಈ ಸಲ ಕಪ್ ನಮ್ಮದಾಗಲಿ ಎನ್ನುವುದು ಆರ್ ಸಿ ಬಿ ಅಭಿಮಾನಿ ಬಳಗದ ಮನದಿಂಗಿತವಾಗಿದೆ.

short by: Nithin