Skip to main content


ಪ್ಲುಟೋದ ಚಂದ್ರನ ಕುಳಿಗೆ ಮಹಾಭಾರತದ ಈ ಪಾತ್ರದ ಹೆಸರು?!

ಪ್ಲುಟೋ ಗ್ರಹದಲ್ಲಿರುವ ಅತ್ಯಂತ ದೊಡ್ಡ ಚಂದ್ರ ಚರೋನ್ ದಲ್ಲಿರುವ ಕುಳಿಯೊಂದಕ್ಕೆ ‘ರೇವತಿ' ಎಂಬ ಹೆಸರನ್ನು  ಎಲ್ಲಾ  ಆಕಾಶಕಾಯಗಳಿಗೆ ಹೆಸರುಗಳನ್ನು ನೀಡುವ ಅಂತಾರಾಷ್ಟ್ರೀಯ ಸಂಸ್ಥೆಯಾದ ಇಂಟರ್ ನ್ಯಾಷನಲ್ ಎಸ್ಟ್ರೋನಾಮಿಕಲ್ ಯೂನಿಯನ್  ನೀಡಿದೆ. ಚರೋನ್ ನಲ್ಲಿರುವ ಉಳಿದ ಕುಳಿಗಳಿಗೆ ಪಾಶ್ಚಿಮಾತ್ಯ ಕಾಲ್ಪನಿಕ ಹೆಸರುಗಳಾದ ಸ್ಟಾರ್ ವಾರ್ಸ್, ಸ್ಟಾರ್ ಟ್ರೆಕ್, ಡಾಕ್ಟರ್ ಹೂ ಮುಂತಾದ ಹೆಸರುಗಳನ್ನಿಡಲಾಗಿದೆ.ಭಾರತದ ಪ್ರಾಚೀನ  ಗ್ರಂಥವಾದ ಮಹಾಭಾರತದಲ್ಲಿನ ಪ್ರಮುಖ ಪಾತ್ರಧಾರಿಯೊಬ್ಬಳ ಹೆಸರು ರೇವತಿಯಾಗಿರುವುದು ಉಲ್ಲೇಖಾರ್ಹ. ಮಹಾಭಾರತದ ವಿವಿಧ ದೃಶ್ಯಗಳಲ್ಲಿ ರೇವತಿ ಬೇರೊಂದು ಯುಗಕ್ಕೆ ಸೇರಿದವಳೆಂಬಂತೆ ಬಿಂಬಿಸಲಾಗಿದೆ. ಇದೇ ಕಾರಣದಿಂದ ವಿಜ್ಞಾನಿಗಳು ಹಾಗೂ ಸಂಶೋಧಕರಿಗೂ ಈ ಪಾತ್ರ  ಅಸಕ್ತಿದಾಯಕವಾಗಿದೆ.ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಟೈಮ್ ಟ್ರಾವೆಲ್ ಪರಿಕಲ್ಪನೆಯನ್ನು ಒಳಗೊಂಡ ಹಿಂದೂ ಗ್ರಂಥ ಮಹಾಭಾರತದ ಪ್ರಮುಖ ಪಾತ್ರಧಾರಿ ರೇವತಿಯ ಹೆಸರನ್ನು ಈ ಕುಳಿಗೆ ನೀಡಲಾಗಿದೆ.

short by : Nithin / read more at Varthabharathi

Comments