Skip to main content


ಮುಂಬೈ ವಿರುದ್ಧ ಹೈದರಾಬಾದಿಗೆ ಪ್ರಯಾಸದ ಗೆಲುವು

 ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರ ಏಳನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡವು ಪ್ರಯಾಸದ ಗೆಲುವು ದಾಖಲಿಸಿದೆ. ಶಿಖರ್ ಧವನ್ 45ರನ್ ಹಾಗೂ ದೀಪಕ್ ಹೂಡಾ 32ರನ್ ಗಳಿಸಿ ಹೈದರಾಬಾದ್ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಆದರೆ, ಪಂದ್ಯವು ಕೊನೆ ಓವರ್ ನ ಕೊನೆ ಎಸೆತದ ತನಕ ಕುತೂಹಲ ಕಾಯ್ದುಕೊಂಡು ಪ್ರೇಕ್ಷಕರನ್ನು ರಂಜಿಸಿತು. ಮುಂಬೈ ಇಂಡಿಯನ್ಸ್ ತಂಡ ನೀಡಿದ್ದ 148ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡವು 20 ಓವರ್ ಗಳಲ್ಲಿ 151/9 ಸ್ಕೋರ್ ಮಾಡಿ ಗೆಲುವು ಸಾಧಿಸಿತು.
             
Short by Prajwal / read more at Prajavani