Skip to main content


ಬಿಗ್ ನ್ಯೂಸ್: ಮತ್ತೊಬ್ಬ ಹೈಪ್ರೊಫೈಲ್​ ಮಹಿಳೆ ಶವ ನಿಗೂಢ ರೀತಿಯಲ್ಲಿ ಪತ್ತೆ

ತಾವು ತಂಗಿದ್ದ ಐಷಾರಾಮಿ ಹೋಟೆಲ್​ನ ಸ್ನಾನದ ಟಬ್​ನಲ್ಲಿ ಕಳೆದ ವರ್ಷ ಭಾರತ ಮೂಲದ ಅಮೆರಿಕಾ ಉದ್ಯಮಿಯನ್ನು ವಿವಾಹವಾಗಿದ್ದ ಮಹಿಳೆಯೊಬ್ಬರ ಶವವು ಪತ್ತೆಯಾಗಿರುವ ಘಟನೆ ಹರಿಯಾಣದ ಫರಿದಾಬಾದ್​ನ ಐಷಾರಾಮಿ ಹೋಟೆಲ್​ನ ಕೊಠಡಿ ಸಂಖ್ಯೆ 631ರಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನ್ಯೂಜೆರ್ಸಿಯಲ್ಲಿ ಉದ್ಯಮಿಯಾಗಿರುವ ಅರುಣ್​ ಕುಮಾರ್​ ಎಂಬುವರ ಪತ್ನಿ ರಿತು ಅಂತ ತಿಳಿದು ಬಂದಿದೆ. ಮೃತ ರಿತು ಏಪ್ರಿಲ್​ 22 ರಿಂದ ಇದೇ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದರು. ಏ.26 ರಂದು ಹೋಟೆಲ್​ನ ಸ್ವಾಗತಕಾರರಿಗೆ ಕರೆ ಮಾಡಿನನಗೆ ಯಾರೂ ತೊಂದರೆ ಕೊಡಬಾರದು. ವೇಟರ್​ಗಳನ್ನು ಕಳುಹಿಸಬೇಡಿ ನನಗೆ ಯಾರು ಕೂಡ ಕರೆ ಮಾಡಿ ತೊಂದರೆ ಕೊಡಬೇಡಿ ಅಂತ ಹೇಳಿದ್ದಾರೆ ಎನ್ನಲಾಗಿದೆ. ರಿತು ಅವರ ಮಾತಿಗೆ ಹೋಟೆಲ್ ಸಿಬ್ಬಂದಿ ಸುಮ್ಮನಾಗಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಮೃತ ರಿತು ಆಕೆಯ ಸೋದರಿ ಕರೆ ಮಾಡಿದಾಗ ರಿತು ಸ್ವೀಕರಿಸಿಲ್ಲ. ಇದರಿಂದ ಗಾಭರಿಗೊಳಗಾದ ರಿತು ಸೋದರಿ ಹೋಟೆಲ್​ ಸ್ವಾಗತಕಾರರಿಗೆ ಕರೆ ಮಾಡಿದಾಗ ಅವರಿಂದಲೂ ಸೂಕ್ತ ಉತ್ತರ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಹೋಟೆಲ್​ ಬಳಿಗೆ ತೆರಳಿ ಕೊಠಡಿ ತೆಗೆದು ನೋಡಿದಾಗ ರಿತು ಬಾತ್​ ಟಬ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.    

short by Pawan / more at Kannada News Now

Comments