Skip to main content


ಅರ್ಜುನ್ ರೆಡ್ಡಿಯ ನಾಯಕಿಗೆ ಬಾರಿ ಡಿಮ್ಯಾಂಡ್

ಟಾಲಿವುಡ್ ನಲ್ಲಿ ಕಳೆದ ವರ್ಷ ಸೂಪರ್ ಹಿಟ್ ಸಿನಿಮಾಗಳ ಲಿಸ್ಟ್ ನಲ್ಲಿ ಇರುವ ಚಿತ್ರಗಳ ಪೈಕಿ 'ಅರ್ಜುನ್ ರೆಡ್ಡಿ' ಕೂಡ ಒಂದು. ಯಂಗ್ ಜನರೇಷನ್ ಅವರಿಗಂತು ಅರ್ಜುನ್ ರೆಡ್ಡಿ ಚಿತ್ರ ಸಖತ್ ಇಷ್ಟವಾಗಿತ್ತು. ಅರ್ಜುನ್ ರೆಡ್ಡಿಯ ಹವಾ ನೋಡಿ ಕನ್ನಡ ಸಿನಿಮಾ ನಿರ್ಮಾಪಕರು ಕೂಡ ಚಿತ್ರದ ರಿಮೇಕ್ ಹಕ್ಕನ್ನು ಖರೀದಿ ಮಾಡಿ ಕನ್ನಡಕ್ಕೆ ತೆಗೆದುಕೊಂಡು ಬಂದಿದ್ದಾರೆ.

ಈ ಸಿನಿಮಾದಲ್ಲಿ ನಾಯಕ ವಿಜಯ್ ದೇವರಕೊಂಡಾ ಸಾಕಷ್ಟು ಅಭಿಮಾನಿಗಳನ್ನ ಪಡೆದುಕೊಂಡರೆ ನಾಯಕಿ ಶಾಲಿನಿ ಪಾಂಡೆ ಕೂಡ ಅಪಾರ ಅಭಿಮಾನಿಗಳನ್ನ ಗಿಟ್ಟಿಸಿಕೊಂಡರು. ಶಾಲಿನಿ ಅವರ ಅಭಿನಯ ಹಾಗೂ ಮುಗ್ಧತೆ ನೋಡುಗರನ್ನ ಸಖತ್ ಇಂಪ್ರೆಸ್ ಮಾಡಿತ್ತು. ಸದ್ಯ ಶಾಲಿನಿ ಪಾಂಡೆ ತೆಲುಗಿನಲ್ಲಿ ಭಾರಿ ಬೇಡಿಕೆಯ ನಟಿಯಾಗಿದ್ದಾರೆ. ಅಷ್ಟೇ ಅಲ್ಲದೆ ಟಾಲಿವುಡ್ ಸೂಪರ್ ಸ್ಟಾರ್ ಜೊತೆಯಲ್ಲಿ ಅಭಿನಯಿಸುವ ಅವಕಾಶವನ್ನೂ ಪಡೆದುಕೊಂಡಿದ್ದಾರೆ ಶಾಲಿನಿ.

ಮಹೇಶ್‌ ಬಾಬು ಅಭಿನಯದ 25 ನೇ ಚಿತ್ರದಲ್ಲಿ ನಟಿಸಲು ಶಾಲಿನಿ ಪಾಂಡೆ ಅವರಿಗೆ ಬುಲಾವ್ ಬಂದಿದೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.      

short by Pawan / read more at Filmibeat

Comments