Skip to main content


"ಲಂಬೋದರ" ಸಿನಿಮಾ ತಂಡದಿಂದ ಐಪಿಎಲ್‍ ಪ್ರಮೋಷನ್ ಸಾಂಗ್!

ಸ್ಯಾಂಡಲ್ ವುಡ್ ನ ಲೂಸ್ ಮಾದ ಅಲಿಯಾಸ್ ಯೋಗಿ ಅಭಿನಯದ 'ಲಂಬೋದರ' ಚಿತ್ರದ ಆಡಿಯೋ ಭಾಗದ ಚಿತ್ರೀಕರಣ ಸದ್ಯಕ್ಕೆ ಮುಗಿದಿದ್ದು, ಸದ್ಯದಲ್ಲೇ ಹಾಡುಗಳ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಮಧ್ಯೆ ಲಂಬೋದರ ಚಿತ್ರತಂಡ ಐಪಿಎಲ್‍ಗಾಗಿ ಪ್ರಚಾರದ ಹಾಡೊಂದನ್ನು ಚಿತ್ರೀಕರಿಸಿದ ವೀಡಿಯೋ ವೈರಲ್ ಆಗಿದೆ.
ಚಿತ್ರತಂಡ ಐಪಿಎಲ್‍ಗಾಗಿ ಬೆಂಗಳೂರು ತಂಡಕ್ಕೆ ವಿಡಿಯೋ ಆಲ್ಬಂ ಚಿತ್ರೀಕರಿಸಿದ್ದು, ಈ ಪ್ರಮೋಷನ್ ವಿಡಿಯೋದಲ್ಲಿ ಯೋಗಿ, ಧರ್ಮಣ್ಣ ಮತ್ತು ಸಿದ್ದು ಕಾಣಿಸಿಕೊಂಡಿದ್ದಾರೆ. ವಿಡಿಯೋವನ್ನು ಪೆನಿಸಿಯಾ ಸ್ಟುಡಿಯೋ ತಂಡ ಚಿತ್ರೀಕರಿಸಿದೆ. `ಲಂಬೋದರ' ಶೀರ್ಷಿಕೆಗೆ `ಬಸವನಗುಡಿ, ಬೆಂಗಳೂರು' ಎಂಬ ಅಡಿಬರಹವೂ ಇದ್ದು, ಇದು ಪಕ್ಕಾ ಬೆಂಗಳೂರಿನ ಬಸವನಗುಡಿ ಸುತ್ತಮುತ್ತಲಿನ ಕಥೆ ಎಂಬುದು ಸ್ಪಷ್ಟವಾಗಿದೆ.
      
short by Pawan / read more at Balkani News