Skip to main content


ಕೋಟಿ ತಲುಪಿದೆ ಅಕ್ಷಯ್ ಕುಮಾರ್ ಸಮವಸ್ತ್ರದ ಹರಾಜು ಬೆಲೆ

ರುಸ್ತಮ್ ಚಿತ್ರದಲ್ಲಿ ನೌಕಾ ಅಧಿಕಾರಿಯಾಗಿದ್ದ ಅಕ್ಷಯ್ ಆ ಚಿತ್ರದಲ್ಲಿ ಧರಿಸಿದ್ದ ಸಮವಸ್ತ್ರವನ್ನು ಆನ್ಲೈನ್ ನಲ್ಲಿ ಹರಾಜಿಗಿಟ್ಟಿದ್ದಾರೆ. ಹರಾಜಿನಲ್ಲಿ ಬಂದ ಹಣವನ್ನು ಪ್ರಾಣಿಗಳ ರಕ್ಷಣೆಗೆ ಕೆಲಸ ಮಾಡ್ತಿರುವ ಎನ್ ಜಿ ಓ ಒಂದಕ್ಕೆ ನೀಡಲಿದ್ದಾರೆ. ಹರಾಜಿನ ಆರಂಭಿಕ ಬೆಲೆ 20 ಸಾವಿರ ರೂಪಾಯಿಯಾಗಿದೆ. 24 ಗಂಟೆಯಲ್ಲಿ ಈ ಸಮವಸ್ತ್ರದ ಬೆಲೆ 2.5 ಕೋಟಿ ರೂಪಾಯಿಗೆ ಬಂದು ನಿಂತಿದೆ. ಏಪ್ರಿಲ್ 26ರಿಂದ ಹರಾಜು ಶುರುವಾಗಿದ್ದು ಮೇ 26 ರವರೆಗೆ ಹರಾಜು ನಡೆಯಲಿದೆ. ಸಮವಸ್ತ್ರವನ್ನು ಹರಾಜಿಗಿಡಲಾಗ್ತಿದೆ. ಯಾರು ಬೇಕಾದ್ರೂ ಹರಾಜಿನಲ್ಲಿ ಪಾಲ್ಗೊಳ್ಳಬಹುದು ಎಂದು ಅಕ್ಷಯ್ ಕುಮಾರ್ ಟ್ವೀಟರ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸದ್ಯ ಕೇಸರಿ ಚಿತ್ರದ ಶೂಟಿಂಗ್ ನಲ್ಲಿ ಅಕ್ಷಯ್ ಬ್ಯುಸಿಯಿದ್ದಾರೆ.    

short by Pawan / more at Kannadadunia

Comments